ಲೇಖಕನ ವ್ಯಕ್ತಿತ್ವ ಮತ್ತು ಲೋಕ ಜ್ಞಾನದ ಪ್ರತಿಬಿಂಬವೇ ಸಾಹಿತ್ಯ: ಡಾ. ಶ್ರೀಶೈಲ್ ನಾಗರಾಳ

ಲೇಖಕನ ವ್ಯಕ್ತಿತ್ವ ಮತ್ತು ಲೋಕ ಜ್ಞಾನದ ಪ್ರತಿಬಿಂಬವೇ ಸಾಹಿತ್ಯ: ಡಾ. ಶ್ರೀಶೈಲ್ ನಾಗರಾಳ

ಲೇಖಕನ ವ್ಯಕ್ತಿತ್ವ ಮತ್ತು ಲೋಕ ಜ್ಞಾನದ ಪ್ರತಿಬಿಂಬವೇ ಸಾಹಿತ್ಯ: ಡಾ. ಶ್ರೀಶೈಲ್ ನಾಗರಾಳ

ಕಲಬುರ್ಗಿ:ಲೇಖಕ ಕಾವ್ಯ ನಿಯಮಗಳನ್ನು ಪಾಲಿಸುತ್ತ ಚರಿತ್ರೆ ಮತ್ತು ಪರಂಪರೆಯನ್ನು ಸಮಕಾಲಿನತೆಗೆ ತಂದರೆ ಮಾತ್ರ ಸಾಹಿತ್ಯ ಉಳಿಯಬಲ್ಲದು,ಲೇಖಕನು ಸದಾ ಅನ್ವೇಷಣೆಯಲ್ಲಿ ತೊಡಗಿರಬೇಕು ಅವನು ಸೃಜಲಶೀಲ ಗುಣ ಹೊಂದಿರಬೇಕು,ಆಗ ಮಾತ್ರ ಸಮಾಜಕ್ಕೆ ಒಳ್ಳೆಯ ಸಾಹಿತ್ಯ ಕೊಡಲು ಸಾಧ್ಯ'ಎಂದು ವಿಮರ್ಶಕ ಡಾ.ಶ್ರೀಶೈಲ್ ನಾಗರಾಳ ಅಭಿಪ್ರಾಯ ಪಟ್ಟರು.ಅವರು ಮುಂದುವರಿದು ಕೃತಿ ವಸ್ತುನಿಷ್ಠವಾಗಿರಬೇಕು,ಪ್ರಾಮಾಣಿಕತೆಯಿಂದ ಕೂಡಿರಬೇಕು,ಅವರು ಡಾ.ಕರುಣಾ ಜಮದರಖಾನಿಯವರ ಸಂಗಾತ ಕೃತಿ ಪರಿಚಯಿಸುತ್ತ ಈ ಕೃತಿಯಲ್ಲಿಯ ಲೇಖನಗಳು ಕರ್ನಾಟಕದ ಏಕೀಕರಣ,ಕನ್ನಡ ಸಾಹಿತ್ಯ ಹಾಗೂ ಕನ್ನಡ ಭಾಷೆಯ ಬೆಳವಣಿಗೆಯ ದರ್ಶನ ಮಾಡಿಸುತ್ತದೆ ಎಂದರು.

ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು "ಸಂಗಾತ" ಕೃತಿ ಪರಿಚಯ ಕಾರ್ಯಕ್ರಮದ ಆಯೋಜನೆ ಮಾಡಿತ್ತು, ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆಯವರು ಅಧ್ಯಕ್ಷೀಯ ಮಾತನಾಡಿದರು,ಲೇಖಕಿ ಡಾ. ಕರುಣಾ ಜಮದರಖಾನಿಯವರು ಉಪಸ್ಥಿತರಿದ್ದರು. ಸಾಹಿತಿಗಳಾದ ಶ್ರೀ ರೇವಣಸಿದ್ಧಪ್ಪ ದುಕಾನ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಡಾ. ವಿಜಯಕುಮಾರ ಪರುತೆ ಕಾರ್ಯಕ್ರಮ ನಿರೂಪಣೆ ಮಾಡಿದರು.ಪ್ರೋ.ಶೋಭಾದೇವಿ ಚೆಕ್ಕಿ,ಡಾ. ಶಿವಶರಣಪ್ಪ ದಾಬಾ,ಡಾ. ಸಿದ್ಧರಾಮಯ್ಯ ಮಠ, ಡಾ. ಚಿ. ಸಿ. ನಿಂಗಣ್ಣ, ಡಾ. ಸಿದ್ಧಪ್ಪ ಹೊಸಮನಿ,ಸಾಹಿತಿ ಸಿ. ಎಸ್. ಮಾಲಿಪಾಟೀಲ್, ಶಿವಾನಂದ ಮಠಪತಿ, ಹಣಮಂತರಾಯ ಸಲಗರ್, ರಾಜೇಂದ್ರ ಝಳಕಿ,ಮತ್ತು ಸಿದ್ರಾಮಪ್ಪ ಮಾಲಿ ಪಾಟೀಲ್ ಮುಂತಾದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.