ಮದ್ಯತ್ಯಾಗಕ್ಕೆ ಮನಪರಿವರ್ತನೆ ಜತೆಗೆ ದೃಢಸಂಕಲ್ಪ ಅಗತ್ಯ ಮದ್ಯತ್ಯಾಗಕ್ಕೆ ಮನಪರಿವರ್ತನೆ ಜತೆಗೆ ದೃಢಸಂಕಲ್ಪ ಅಗತ್ಯ: ಶರಣಪ್ಪ ಸದಲಾಪುರ

ಮದ್ಯತ್ಯಾಗಕ್ಕೆ ಮನಪರಿವರ್ತನೆ ಜತೆಗೆ ದೃಢಸಂಕಲ್ಪ ಅಗತ್ಯ ಮದ್ಯತ್ಯಾಗಕ್ಕೆ ಮನಪರಿವರ್ತನೆ ಜತೆಗೆ ದೃಢಸಂಕಲ್ಪ ಅಗತ್ಯ: ಶರಣಪ್ಪ ಸದಲಾಪುರ

ಮದ್ಯತ್ಯಾಗಕ್ಕೆ ಮನಪರಿವರ್ತನೆ ಜತೆಗೆ ದೃಢಸಂಕಲ್ಪ ಅಗತ್ಯ

ಮದ್ಯತ್ಯಾಗಕ್ಕೆ ಮನಪರಿವರ್ತನೆ ಜತೆಗೆ ದೃಢಸಂಕಲ್ಪ ಅಗತ್ಯ: ಶರಣಪ್ಪ ಸದಲಾಪುರ

ಕಲಬುರಗಿ: ಮದ್ಯವ್ಯಸನದಿಂದ ಹೊರಬರಲು ಮನಪರಿವರ್ತನೆಯ ಜೊತೆಗೆ ದೃಢಸಂಕಲ್ಪ ಮಾಡುವುದು ಅಗತ್ಯ. ಶಿಬಿರದಲ್ಲಿ ಪಡೆದ ಮಾರ್ಗದರ್ಶನ ಹಾಗೂ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮಂಡಳಿ ಅಧ್ಯಕ್ಷರು ಶ್ರೀ ಶರಣಪ್ಪ ಸದಲಾಪುರ ಹೇಳಿದರು.

ಕಮಲಾಪುರ ತಾಲೂಕಿನಲ್ಲಿ ಆಯೋಜಿಸಲಾಗಿದ್ದ 2113ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ದಾಖಲಾತಿ ಹಸ್ತಾಂತರಿಸಿ ಅವರು ಮಾತನಾಡಿದರು. ಮದ್ಯಪಾನ ತ್ಯಜಿಸುವ ದೃಢ ನಿರ್ಧಾರ ಕೈಗೊಂಡು ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುವಂತೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಮಾತನಾಡಿ, ಮದ್ಯವ್ಯಸನಿಗಳು ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಿ ಮದ್ಯಮುಕ್ತರಾಗಿ ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಪೂಜ್ಯ ನಾಗೇಶ ಮುತ್ಯಾ ಗಣಜಲಖೇಡ್ ಶ್ರೀಗಳು ಸಾನಿಧ್ಯ ವಹಿಸಿದ್ದರು. ಶ್ರೀಮತಿ ಜಯಶ್ರೀ ಮತ್ತಿಮಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಂಟು ದಿನಗಳ ಶಿಬಿರದಲ್ಲಿ ಪಡೆದುಕೊಂಡ ಮನಪರಿವರ್ತನೆಗೆ ಸಂಬಂಧಿಸಿದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಆತ್ಮವಿಶ್ವಾಸದಿಂದ ಬದುಕು ನಡೆಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಎನ್. ಬಾಬಾಳಗಾಂವ, ಅನಿಲಕುಮಾರ ಡಾಂಗೆ, ರವಿಕುಮಾರ ನಿಲೂರ, ಅಣ್ಣಪ್ಪ ಜಮಾದಾರ, ದಾಸಿಮಯ್ಯ ವಡ್ಡನಕೇರಿ, ಶಿವಕುಮಾರ ಮರತೂರ, ಶಿವರುದ್ರಪ್ಪ ಮಾಟೂರ, ರಮೇಶ ಕೋರಿ, ಸಾಬಯ್ಯಾ ರತ್ನಾಕರ, ವಿರೇಶ ಜಮಾದಾರ ಹಾಗೂ ಚಂದ್ರಕಾಂತ ಜಮಾದಾರ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾಂತ ಕುಮ್ಮಣ ವಹಿಸಿದ್ದರು. ಯೋಜನಾಧಿಕಾರಿ ರಜಬಲಿ ಅವರು ಸ್ವಾಗತಿಸಿದರು. ಸೂರ್ಯಕಾಂತ ಅವರಾದ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕರು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.