ವಚನಗಳ ಮೌಲ್ಯ ಅಳವಡಿಸಿಕೊಳ್ಳಿ; ದಿನನಿತ್ಯದ ಬದುಕಿಗೆ ಬಸವಾದಿ ಶರಣರ ತತ್ವಗಳು ದಾರಿದೀಪ
ಕಮಲನಗರ: ಚನ್ನಬಸವ ಪಟ್ಟದ್ದೇವರು ಸ್ಮಾರಕ ಭವನದಲ್ಲಿ ನಡೆದ ಶ್ರಾವಣಮಾಸ 18ನೇ ಪ್ರವಚನ ಕಾರ್ಯಕ್ರಮದಲ್ಲಿ ದಾಸೋಹಿ ಮಹಾದೇವ ಬಿರಾದಾರ ಅವರನ್ನು ಸತ್ಕರಿಸಿದರು.
ವಚನಗಳ ಮೌಲ್ಯ ಅಳವಡಿಸಿಕೊಳ್ಳಿ; ದಿನನಿತ್ಯದ ಬದುಕಿಗೆ ಬಸವಾದಿ ಶರಣರ ತತ್ವಗಳು ದಾರಿದೀಪ
ಕಮಲನಗರ: ಆಧುನಿಕ ಜೀವನದ ಜಂಜಾಟ, ಮಾನಸಿಕ ಒತ್ತಡ ಹಾಘೂ ಸಾಮಾಜಿಕ ಮೌಲ್ಯಗಳ ಕುಸಿತಕ್ಕೆ ವಚನ ಸಾಹಿತ್ಯದಲ್ಲಿ ಸ್ಪಷ್ಟ ಪರಿಹಾರವಿದೆ ಎಂದು ಪ್ರವಚನಕಾರರಾದ ಸುವರ್ಣಾ ಚಿಮಕೋಡೆ ಹೇಳಿದರು.
ಪಟ್ಟಣದ ಡಾ| ಚನ್ನಬಸವ ಪಟ್ಟದ್ದೇವರು ಸ್ಮಾರಕ ಭವನದಲ್ಲಿ ಶ್ರಾವಣಮಾಸ ಪ್ರಯುಕ್ತ ಬಸವತತ್ವ ಚಿಂತನ 18ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಾದಿ ಶರಣರು ನೀಡಿದ ಕಾಯಕ, ದಾಸೋಹ ಃಆಗೂ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಹಾಗೂ ಶಾಂತಿಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.
12ನೇ ಶತಮಾನದ ವಚನಕಾರರು ಕೇವಲ ಸಾಹಿತ್ಯವನ್ನು ಸೃಷ್ಟಿಸಲಿಲ್ಲ. ಬದಲಾಗಿ ಶೋಷಣೆ ಮುಕ್ತ ಹಾಗೂ ಮೌಲ್ಯಾಧಾರಿತ ಸಮಾಜದ ಕನಸು ಕಂಡಿದ್ದರು. ಅವರ ಸರಳ ಸಾಲುಗಳಲ್ಲಿ ಅಡಗಿರುವ ಮಹಾನ್ ಮೌಲ್ಯಗಳನ್ನು ಇಂದಿನ ಪೀಳಿಗೆ ಅಳವಡಿಸಿಕೋಳ್ಳುವುದು ಅತ್ಯಗತ್ಯವಾಗಿದೆ ಎಂದರು.
ಪ್ರವಚನ ಸಮಿತಿ ಅಧ್ಯಕ್ಷ ರಮೇಶ ಬಿರಾದಾರ, ಉಪಾಧ್ಯಕ್ಷ ಸಂಗಮೇಶ ಟೋಣ್ಣೆ, ಪ್ರಬೂರಾವ ಕಳಸೆ ಮಡಿವಾಳಪ್ಪ ಮಹಾಜನ, ಸೂರ್ಯಕಾಂತ ಮಹಾಜನ, ಪ್ರಕಾಶ ಮಾನಕರೆ, ಸುರೇಶ ಸೋಲ್ಲಾಪುರೆ, ಶ್ಯಾಮ ಬಿರಾದಾರ, ಶರಣಬಸಪ್ಪ ಚಿಕ್ಕಮುರ್ಗೆ, ಅಬವಿನಾಸ ಶಿವಣಕರ, ಶೈಲೇಶ ಶಿವಣಕರ್, ಮಹಾದೇವ ಬಿರಾದಾರ, ಪ್ರಕಾಶ ಸೋಲ್ಲಾಪುರೆ, ಪ್ರಸಾದ ಬಿರಾದಾರ, ಬಾಲಾಜಿ ಬಿರಾದಾರ ಮತ್ತು ಕುಟುಂಬಸ್ಥರು, ಮಹಿಳೆಯರು, ಯುವಕರು ಹಾಗೂ ಗಣ್ಯರು ಇದ್ದರು.

