ಸೆ.18ರಂದು ‘ಮರು ಸ್ವಾತಂತ್ರ್ಯೋತ್ಸವ’ ಆಚರಣೆಗೆ ಹೊಸ ಆದೇಶಕ್ಕೆ ಆಗ್ರಹ

ಸೆ.18ರಂದು ‘ಮರು ಸ್ವಾತಂತ್ರ್ಯೋತ್ಸವ’ ಆಚರಣೆಗೆ ಹೊಸ ಆದೇಶಕ್ಕೆ ಆಗ್ರಹ

ಸೆ.18ರಂದು ‘ಮರು ಸ್ವಾತಂತ್ರ್ಯೋತ್ಸವ’ ಆಚರಣೆಗೆ ಹೊಸ ಆದೇಶಕ್ಕೆ ಆಗ್ರಹ

ಕಲಬುರಗಿ, ಸೆ.1: ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು ಸೆಪ್ಟೆಂಬರ್ 18ರಂದು ‘ಮರು ಸ್ವಾತಂತ್ರ್ಯೋತ್ಸವ’ ದಿನವನ್ನಾಗಿ ಆಚರಿಸುವಂತೆ ಹೊಸ ಆದೇಶ ಹೊರಡಿಸಬೇಕು ಎಂದು ನ್ಯಾಯವಾದಿ ಜೇನವೆರಿ ವಿನೋದಕುಮಾರ ಆಗ್ರಹಿಸಿದರು.

ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಹೈದರಾಬಾದ್ ವಿಮೋಚನಾ ಹೋರಾಟದ ನೈಜ ಇತಿಹಾಸವನ್ನು ಆಧರಿಸಿ ದಿನಾಚರಣೆ ನಡೆಸುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದು,ಅದರ ಕುರಿತು ವಿಚಾರಿಸಿದರು.

ಸೆ.17ರಂದು ಆಚರಿಸಲಾಗುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವದ ದಿನಾಂಕವನ್ನು ತಿದ್ದುಪಡಿ ಮಾಡಿ, ಸೆ.18ರಂದು ‘ಮರು ಸ್ವಾತಂತ್ರ್ಯೋತ್ಸವ’ ಎಂದು ಮರುನಾಮಕರಣ ಮಾಡಿ ಆಚರಿಸಲು ಸಚಿವ ಸಂಪುಟದಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಮತ್ತೆ ಒತ್ತಾಯಿಸಿದರು. ವಿಮೋಚನೆಗಾಗಿ ಹೋರಾಡಿದ ಹೋರಾಟಗಾರರ ಬಲಿದಾನ ಮತ್ತು ತ್ಯಾಗವನ್ನು ಪರಿಗಣಿಸಿ ನ್ಯಾಯಯುತ ನಿರ್ಧಾರ ಕೈಗೊಳ್ಳುವಂತೆ ಸತತ ಮನವಿ ಮಾಡಿದರು.

ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ವಿಧಾನ ಪರಿಷತ್‌ನ ಹಿರಿಯ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

 ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷ ರಾಜೇಶ್ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಯುವ ಮುಖಂಡ ಮಜರ್ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹಾರ್ವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.