ಗಾಣದ ಕಣ್ಣಪ್ಪ ಆಧ್ಯಾತ್ಮಿಕ ಉನ್ನತಿ ಸಾಧಿಸಿದ ಶರಣರು: ಸಂತೋಷ ಹೂಗಾರ

ಗಾಣದ ಕಣ್ಣಪ್ಪ ಆಧ್ಯಾತ್ಮಿಕ ಉನ್ನತಿ ಸಾಧಿಸಿದ ಶರಣರು: ಸಂತೋಷ ಹೂಗಾರ

ಗಾಣದ ಕಣ್ಣಪ್ಪ ಆಧ್ಯಾತ್ಮಿಕ ಉನ್ನತಿ ಸಾಧಿಸಿದ ಶರಣರು: ಸಂತೋಷ ಹೂಗಾರ

ಕಲಬುರಗಿ: ಗಾಣದ ಕಣ್ಣಪ್ಪ ಶರಣರ ವಚನಗಳು ಆಳವಾದ ತಾತ್ವಿಕ ಚಿಂತನೆ ಹಾಗೂ ಮಾರ್ಮಿಕ ಅರ್ಥವನ್ನು ಒಳಗೊಂಡಿದ್ದು, ಆತ್ಮಸಾಕ್ಷಾತ್ಕಾರ, ಭಕ್ತಿ ಮತ್ತು ಶರಣತತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಅಹಂಕಾರವನ್ನು ತೊರೆದು ಗುಹೇಶ್ವರನಲ್ಲಿ ಸಂಪೂರ್ಣ ಶರಣಾಗುವ ಸಂದೇಶವನ್ನು ಅವರ ವಚನಗಳು ಸಾರುತ್ತವೆ. ಹೀಗಾಗಿ ಗಾಣದ ಕಣ್ಣಪ್ಪನವರು ಆಧ್ಯಾತ್ಮಿಕ ಉನ್ನತಿ ಸಾಧಿಸಿದ ಶರಣರಾಗಿದ್ದಾರೆ ಎಂದು ಉಪನ್ಯಾಸಕ ಸಂತೋಷ ಹೂಗಾರ ಹೇಳಿದರು.

ರಾಮತೀರ್ಥ ನಗರದ ಆಂಜನೇಯ ಕಾಲೋನಿಯಲ್ಲಿರುವ ಅರುಣಕುಮಾರ ಕಲಶೆಟ್ಟಿ ಅವರ ಮನೆ ಅಂಗಳದಲ್ಲಿ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ಶರಣದರ್ಶನ ಉಪನ್ಯಾಸ ಮಾಲೆ’ ಕಾರ್ಯಕ್ರಮದಲ್ಲಿ ಗಾಣದ ಕಣ್ಣಪ್ಪ ಕುರಿತು ಉಪನ್ಯಾಸ ನೀಡಿದರು.

೧೨ನೇ ಶತಮಾನದ ನಂತರದ ಸಾಹಿತ್ಯ ಕ್ಷೇತ್ರದಲ್ಲಿಯೂ ಗಾಣದ ಕಣ್ಣಪ್ಪನವರ ಉಲ್ಲೇಖಗಳು ಕಂಡುಬರುತ್ತವೆ. ಶರಣ ಸಾಹಿತ್ಯದಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದ್ದು, ಅವರ ವಚನಗಳು ಇಂದಿಗೂ ಆಧ್ಯಾತ್ಮಿಕ ಹಾಗೂ ತಾತ್ವಿಕ ಚಿಂತನೆಗೆ ದಾರಿದೀಪವಾಗಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ಅಧಿಕಾರಿ ಬಸವರಾಜ ಎನ್. ಪುಣ್ಯಶೆಟ್ಟಿ ಮಾತನಾಡಿ, “ಆಗಿನ ಶರಣರ ಅನುಭವ ಮಂಟಪವೇ ಇಂದಿನ ಭಾರತ ದೇಶದ ಸಂಸತ್ ಭವನದ ಪರಿಕಲ್ಪನೆಗೆ ಹೋಲಿಕೆಯಾಗಿದೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ” ಎಂದರು.

ಕಲ್ಯಾಣಪ್ಪ ಬಿರಾದಾರ, ಓಂಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಬಸವರಾಜ ಧೂಳಾಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಕುಮಾರ ಕಲಶೆಟ್ಟಿ ಸ್ವಾಗತಿಸಿದರು. ಶರಣದರ್ಶನ ಉಪನ್ಯಾಸ ಮಾಲೆಯ ಸಂಚಾಲಕ ಶಿವರಾಜ ಅಂಡಗಿ ನಿರೂಪಿಸಿದರು. ವಿನೋದ ಜನೇವರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪಂಡಿತರಾಯ ಕಲಶೆಟ್ಟಿ, ಮೈನಾಬಾಯಿ ಕಲಶೆಟ್ಟಿ, ಗುರುಸ್ವಾಮಿ, ಶರಣರಾಜ ಕಲಶೆಟ್ಟಿ, ಮಹಾಂತೇಶ ನಿಂಬರ್ಗಾ, ಶರಣು ವಗ್ಗಾಲೆ, ಶಾಂತಾ, ಚಂದ್ರಕಲಾ, ಮಹಾಂತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.