ಪರಿಸರವಾದಿ ಸಾಹಿತಿ ಪಿ. ಮಾನು ಸಾಗರ ನಿಧನ

ಪರಿಸರವಾದಿ ಸಾಹಿತಿ ಪಿ. ಮಾನು ಸಾಗರ ನಿಧನ
  • ಪರಿಸರವಾದಿ ಸಾಹಿತಿ ಪಿ. ಮಾನು ಸಾಗರ ನಿಧನ
  • ಸಾಹಿತ್ಯ ಲೋಕದಲ್ಲಿ ಶೋಕದ ಛಾಯೆ

ಕಲಬುರಗಿ, ಸೆ. 8: ಪರಿಸರವಾದಿ ಹಾಗೂ ಸಾಹಿತಿ, ಶಹಾಪುರ ತಾಲ್ಲೂಕಿನ ಸಗರ ಗ್ರಾಮ ಮೂಲದ ಪಿ. ಮಾನು ಸಾಗರ (73) ಅವರು ಸೆಪ್ಟೆಂಬರ್ 8, 2026ರಂದು ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅರಣ್ಯ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಪಿ. ಮಾನು ಸಾಗರ ಅವರು, ಸಗರನಾಡು ಸಹಕಾರ ಪತ್ತಿನ ಸಂಘದ ಅಧ್ಯಕ್ಷರಾಗಿ ಹಾಗೂ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪರಿಸರ ಸಂರಕ್ಷಣೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು, ಸರಳತೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಅವರ ಅಂತ್ಯಕ್ರಿಯೆಯು ಸೆಪ್ಟೆಂಬರ್ 9, 2026ರಂದು ಮಧ್ಯಾಹ್ನ 12 ಗಂಟೆಗೆ ನಗರದ ಚಿತ್ತಾರಿ ಅಡ್ಡಾ ಪಕ್ಕದಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.

ಪಿ. ಮಾನು ಸಾಗರ ಅವರ ನಿಧನಕ್ಕೆ ಬಿ.ಜಿ. ಕೊನೇಕ್, ಡಾ. ಚಿ.ಸಿ. ನಿಂಗಣ್ಣ, ವೆಂಕಟೇಶ ನೀರಡಗಿ, ಎಸ್.ಎಲ್. ಪಾಟೀಲ, ಡಾ. ಎಸ್.ಎಸ್. ಗುಬ್ಬಿ, ಶಿವಕುಮಾರ್ ಸಾಬದಿ, ಡಾ ಆನಂದ ಪಾಟೀಲ ಸಿದ್ದಾಮಣಿ, ಡಾ ವೀರಶೇಟ್ಟಿ ಗಾರಂಪಳ್ಳಿ, ಚಿದಾನಂದ ಹಿರೇಮಠ, ಡಾ. ಗವಿಸಿದ್ದಪ್ಪ ಪಾಟೀಲ, ಶರಣಗೌಡ ಪಾಟೀಲ ಪಾಳಾ, ಡಾ. ಶರಣಬಸಪ್ಪ ವಡ್ಡನಕೇರಿ, ಶಿವರಾಜ್ ಪಾಟೀಲ, ಬಿ.ಎಚ್. ನಿರಗುಡ, ಡಾ. ಶಂಕರ ಬಾಳಿ ಹಾಗೂ ಬಿ.ಎಸ್. ಮಾಲಿ ಪಾಟೀಲ , ವಿಶ್ವನಾಥ ಭಕರೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಪಿ. ಮಾನು ಸಾಗರ ಅವರ ನಿಧನದಿಂದ ಸಾಹಿತ್ಯ ಹಾಗೂ ಪರಿಸರ ಲೋಕದ ಒಬ್ಬ ಹಿರಿಯ ಚಿಂತಕರನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಗೆ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ.