ಕಲಂ 371(J) ದಶಮಾನದ ಅವಲೋಕನ ಕಾರ್ಯಾಗಾರ

ಕಲಂ 371(J) ದಶಮಾನದ ಅವಲೋಕನ ಕಾರ್ಯಾಗಾರ

ಕಲಂ 371(J) ದಶಮಾನದ ಅವಲೋಕನ ಕಾರ್ಯಾಗಾರ 

 ಕಲಬುರಗಿ: ಸರ್ಕಾರಿ ಮಹಾವಿದ್ಯಾಲಯ ಸ್ವಾಯುತ್ತ ಕಲ್ಬುರ್ಗಿಯ ಐ.ಕ್ಯೂ.ಎ.ಸಿ ವತಿಯಿಂದ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕಲಂ 371(J) ದಶಮಾನದ ಅವಲೋಕನ ಕಾರ್ಯಾಗಾರವನ್ನು ಕಲ್ಯಾಣ ಕರ್ನಾಟಕ ಹೋರಾಟ ಪ್ರದೇಶಾಭಿವೃದ್ಧಿ ಸಮಿತಿ ಕಲಬುರಗಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ದಸ್ತಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಾಕ್ರಮವನ್ನು ಉದ್ಘಾಟಿಸಿ, "ಕಲಂ 371(J) ಯ ಮೀಸಲಾತಿಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿರುವ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಳ್ಳುವುದರಲ್ಲಿ ಮುಂದಾಗಬೇಕು" ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ತಜ್ಞರಾದ ಶ್ರೀ ರಜಾಕ್ ಉಸ್ತಾದ್ ಅವರು "ಕಲಂ 371(J) ಅನುಷ್ಠಾನ ಸಾಧಕ ಬಾಧಕಗಳು" ಮತ್ತು "ಕಲಂ 371(J) ಶಿಕ್ಷಣದ ಸಬಲೀಕರಣ" ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮನ್ವಯಕಾರರಾಗಿ ಆಗಮಿಸಿದ ಡಾ. ಶ್ರೀಮಂತ ಹೋಳ್ಕರ್ ಹಾಗೂ ಶ್ರೀ ನಾಗೇಂದ್ರಪ್ಪ ಅವರಾದಿ ಅವರು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಇಂದುಮತಿ ಪಿ ಪಾಟೀಲ ಅವರು ವಹಿಸಿ ಮಾತನಾಡಿದರು.

ಮಧ್ಯಾಹ್ನದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷರು ಹಾಗೂ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಅವರು 371(J) ಕುರಿತು ಉದ್ದೆಶಿಸಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಮೀನಾಕ್ಷಿ ಬಾಳಿ ಹಾಗೂ ನೀಲಾ ಕೆ, ಶಿವಶರಣಪ್ಪ ಮುಳೇಗಾಂವ್ ಅವರು 371(J) ಕುರಿತು ವಿಸ್ತಾರವಾಗಿ ವಿವರಿಸಿದರು.ನಾಡಿನ ವಿಚಾರವಾದಿಗಳಾದ ಪ್ರೊ. ಆರ್.ಕೆ. ಹುಡುಗಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಡಾ. ಮಲ್ಲೇಶಪ್ಪ ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ದವಲಪ್ಪ ಬಿ.ಹೆಚ್., ಡಾ. ಬಲಭೀಮ ಸಾಂಗ್ಲಿ, ಡಾ. ರವೀಂದ್ರಕುಮಾರ ಭಂಡಾರಿ, ಡಾ. ರಬಿಯಾ ಇಫತ್, ಐ.ಕ್ಯೂ.ಎಸಿ ಸಂಯೋಜಕರಾದ ಮಹೇಶ, ಡಾ. ನಾಗಪ್ಪ ಗೋಗಿ , ಡಾ. ಬಸಂತ ಸಾಗರ, ಡಾ. ಮಲ್ಲಿಕಾರ್ಜುನ ಶೆಟ್ಟಿ , ಡಾ. ರಾಜೇಶ ಅಜಬಸಿಂಗ್.‌‌ ಡಾ. ಶಂಕರ ರಾಠೋಡ , ಡಾ. ಆಜ್ರಾ ಪರವಿನ,ಡಾ. ಸುಜಾತಾ ದೊಡ್ಡಮನಿ, ಶ್ರೀ ಅಜಯಸಿಂಗ, ಶ್ರೀಮತಿ ವಿಜಯಲಕ್ಷ್ಮಿ ಬಿ. ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಯಾದ ಮಹಾದೇವ ಪ್ರಾರ್ಥಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಶ್ರೀಮಂತ ಹೊಳ್ಕರ್ ಅವರು ಸ್ವಾಗತಿಸಿದರು .ಕಾಲೇಜಿನ ಐ.ಕ್ಯೂ. ಎ.ಸಿ. ಸಂಯೋಜಕರಾದ ಶ್ರೀ ಮಹೇಶ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ 150ಕ್ಕೂ ಹೆಚ್ಚು ಪ್ರಾಧ್ಯಾಪಕರು ಆಗಮಿಸಿ ಯಶಸ್ವಿಗೊಳಿಸಿದ್ದರು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು . ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.