ವೃತ್ತಿ ರಂಗಭೂಮಿ ರಂಗಾಯಣದ ನೂತನ ಸಮುಚ್ಚಯ ನಿರ್ಮಾಣಕ್ಕೆ ಸೆ.4ರಂದು ಭೂಮಿಪೂಜೆ

ವೃತ್ತಿ ರಂಗಭೂಮಿ ರಂಗಾಯಣದ ನೂತನ ಸಮುಚ್ಚಯ ನಿರ್ಮಾಣಕ್ಕೆ ಸೆ.4ರಂದು ಭೂಮಿಪೂಜೆ

ವೃತ್ತಿ ರಂಗಭೂಮಿ ರಂಗಾಯಣದ ನೂತನ ಸಮುಚ್ಚಯ ನಿರ್ಮಾಣಕ್ಕೆ ಸೆ.4ರಂದು ಭೂಮಿಪೂಜೆ

ದಾವಣಗೆರೆ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ವತಿಯಿಂದ ವೃತ್ತಿ ರಂಗಭೂಮಿ ರಂಗಾಯಣದ ನೂತನ ಸಮುಚ್ಚಯ ಹಾಗೂ ಥಿಯೇಟರ್ ಮಾ

ಮೂಜಿಯಿಸಿಯಂ ನಿರ್ಮಾಣಕ್ಕೆ ಭೂಮಿಪೂಜೆ ಮತ್ತು ಶಂಕುಸ್ಥಾಪನೆ ಸಮಾರಂಭ ಸೆಪ್ಟೆಂಬರ್ 4ರಂದು ನಡೆಯಲಿದೆ.

ಹರಿಹರ ತಾಲ್ಲೂಕಿನ ಕೊಟ್ಟೂರು ಬೆಟ್ಟದ ಪರಿಸರದಲ್ಲಿ (ಅಬ್ಬಲ್ ಕಲಾ ಶಾಲೆಯ ಪಕ್ಕ) ಶುಕ್ರವಾರ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಭೂಮಿಪೂಜೆ ನೆರವೇರಿಸಲಿದ್ದು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ , ಅನುಪಸ್ಥಿತಿ ಕೆ.ಎಸ್. ಬಸವಂತಪ್ಪ , ಸಚಿವ ಮುಜುರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ, ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ,ವಿಧಾನ ಪರಿಷತ್ ಸದಸ್ಯ ಡಿ ಟಿ ಶ್ರೀನಿವಾಸ,ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿಎಸ್ ಮರಿಯೋಜಿರಾವ ಭಾಗವಹಿಸಲಿದ್ದಾರೆ.

ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಸರ್ಕಾರದ ಕಾರ್ಯದರ್ಶಿ ಮಂಜುಶ್ರೀ, ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ ಎಸ್ ಮಂಜುನಾಥ್ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್ ಚಲವಾದಿ ಅವರು ವಿಶೇಷವಾಗಿ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ

 ದಾವಣಗೆರೆ ಜಿಲ್ಲೆಯ ರಂಗಭೂಮಿ ಕಲಾವಿದರು, ರಂಗಕರ್ಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.

ವೃತ್ತಿ ರಂಗಭೂಮಿ ರಂಗಾಯಣದ ನೂತನ ಸಮುಚ್ಚಯ ಹಾಗೂ ಥಿಯೇಟರ್ ಮಾಯಿಸಿಯಂ ನಿರ್ಮಾಣದಿಂದ ದಾವಣಗೆರೆ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ಕಲಾವಿದರು ಹಾಗೂ ರಂಗಾಸಕ್ತರಿಗೆ ಉತ್ತಮ ವೇದಿಕೆ ದೊರೆಯಲಿದೆ. ರಂಗಭೂಮಿಯ ಬೆಳವಣಿಗೆಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ. ಕರ್ನಾಟಕದ ರಂಗಭೂಮಿ ಕ್ಷೇತ್ರಕ್ಕೆ ಸರ್ಕಾರದ ಬೆಂಬಲ ಹೆಚ್ಚುತ್ತಿರುವುದಕ್ಕೆ ಇಂತಹ ಯೋಜನೆಗಳು ಸಾಕ್ಷಿಯಾಗಿವೆ.