ನಳ ಚರಿತ್ರೆ ಒಂದು ಮಹಾಕಾವ್ಯ - ಶಿವಶಂಕರ್ ತರನಳ್ಳಿ.

ನಳ ಚರಿತ್ರೆ ಒಂದು ಮಹಾಕಾವ್ಯ -  ಶಿವಶಂಕರ್ ತರನಳ್ಳಿ.

ನಳ ಚರಿತ್ರೆ ಒಂದು ಮಹಾಕಾವ್ಯ - ಶಿವಶಂಕರ್ ತರನಳ್ಳಿ.

ಹುಮನಾಬಾದ : ಕನಕದಾಸರು ಕಾವ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಜೊತೆಗೆ ಮಾನವನ ಜೀವನದ ಏಳು ಬೀಳುಗಳನ್ನು ಮತ್ತು ಭಗವಂತನಲ್ಲಿರುವ ಸಂಕಲ್ಪದ ಭಕ್ತಿಯನ್ನು ತಿಳಿಸಿಕೊಟ್ಟಿದ್ದಾರೆ ಎಂದು ಶಿಕ್ಷಣ ಪ್ರೇಮಿ ಶಿವಶಂಕರ್ ತರನಹಳ್ಳಿ ಹೇಳಿದರು.

ನಗರದ ಶಕುಂತಲಾ ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸದರದ ಕಲಾಣಿಕೆ ಸಾಹೇಗದಲ್ಲಿ ಹಮ್ಮಿಕೊಂಡಿರುವ ಕನ್ನಡದ ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನಕದಾಸರು ರಚಿಸಿದ ನಳ ಚರಿತ್ರೆ ಒಂದು ಅವಲೋಕನ ಕುರಿತು ಮಾತನಾಡಿದ ಅವರು, ನಳ ದಮಂತಿಯರ ಪ್ರೇಮ ಪ್ರಸಂಗವನ್ನು ಬಹಳ ಅರ್ಥಪೂರ್ಣವಾಗಿ ಇಲ್ಲಿ ವಿವರಿಸಿದ್ದಾರೆ.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸುನಿಲ್ ಕುಮಾರ್ ಅಗಡಿ ಮಾತನಾಡಿ ಬದುಕಿನ ಕಷ್ಟದ ದಿನಗಳಲ್ಲಿ ಧರ್ಮ ಮತ್ತು ಪತಿ ಪತ್ನಿಯರ ನಿಷ್ಠೆ ಹೇಗೆ ಕೈಯುಡೆಯುತ್ತದೆ ಎಂಬುದಕ್ಕೆ ನಳೆ ಚರಿತ್ರೆ ಮಹಾಕಾವ್ಯವೆ ಸಾಕ್ಷಿ ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲರಾದ ವಿನಾಯಕರಾವ್ ಭಾರಡ,ಈ ಸಮಾರಂಭದ ವೇದಿಕೆಯ ಮೇಲೆ ಪರಿಸರ ಪ್ರೇಮಿ ಸಂಗಮೇಶ್ ಜವಾದಿ ಆಡಳಿತ, ಅಧಿಕಾರಿಗಳಾದ ಸುಭಾಸ್ ಪೂಜಾರಿ, ಸಗರದ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶೇನ್ನೂರ ಪ್ರಾಸ್ತಾವಿಕ ನುಡಿಗಳ ಹಾಡಿದರು.ಪವನ ಪಾಟೀಲ ಸ್ವಾಗತಿಸಿ ವಂದಿಸಿದರು.