ಯುವಕರು ಬೈಕ್ ರ‍್ಯಾಲಿ ಮೂಲಕ ಅದ್ದೂರಿ ಸ್ವಾಗತ: ಜೆಡಿಎಸ್ ಯುವ ಅಧ್ಯಕ್ಷ ಪ್ರವೀಣ ಜಾಧವ ಜನ್ಮದಿನ ಆಚರಣೆ

ಯುವಕರು ಬೈಕ್ ರ‍್ಯಾಲಿ ಮೂಲಕ ಅದ್ದೂರಿ ಸ್ವಾಗತ: ಜೆಡಿಎಸ್ ಯುವ ಅಧ್ಯಕ್ಷ ಪ್ರವೀಣ ಜಾಧವ ಜನ್ಮದಿನ ಆಚರಣೆ

ಯುವಕರು ಬೈಕ್ ರ‍್ಯಾಲಿ ಮೂಲಕ ಅದ್ದೂರಿ ಸ್ವಾಗತ: ಜೆಡಿಎಸ್ ಯುವ ಅಧ್ಯಕ್ಷ ಪ್ರವೀಣ ಜಾಧವ ಜನ್ಮದಿನ ಆಚರಣೆ

ಕಲಬುರಗಿ: ಜೆಡಿಎಸ್ ಯುವ ಅಧ್ಯಕ್ಷ ಪ್ರವೀಣ್ ಜಾದವ್ ಅವರ ಜನ್ಮದಿನವನ್ನು ನಗರದ ಜಗತ್ ಮಾರ್ಗದಲ್ಲಿರುವ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ, ಯುವಕರು ಸಮ್ಮುಖದಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ನಗರದ ಚೌಕ್ ಪೊಲೀಸ್ ಠಾಣೆಯಿಂದ ಜಗತ್ ಮಾರ್ಗದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿವರೆಗೆ ಯುವಕರು ಬೈಕ್ ರ‍್ಯಾಲಿ ನಡೆಸಿ ಪ್ರವೀಣ ಜಾಧವ ಅವರನ್ನು ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ಪಕ್ಷದ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿ, ಪ್ರವೀಣ್ ಜಾದವ್ ಅವರಿಗೆ ಮುಖಂಡರು ಹಾಗೂ ಕಾರ್ಯಕರ್ತರು ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಪ್ರವೀಣ್ ಜಾಧವ ಅವರು ಯುವಕರನ್ನು ಸಂಘಟಿಸುವ ಮೂಲಕ ಜೆಡಿಎಸ್ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಶ್ರಮಿಸುತ್ತಿದ್ದಾರೆ. ಅವರ ಮುಂದಿನ ರಾಜಕೀಯ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಬಿರಬಿಟ್ಟಿ, ಗಂಗಾಧರ್ ಪಾಂಚಾಳ್, ಮಾಂತಪ್ಪ ಮದರಿ, ಚಾಂದ್ ಮೋರೆ, ರಾಘವೇಂದ್ರ, ರುದ್ರಾಹಡಪದ, ಸಚಿನ್, ರಾಜೇಂದ್ರ, ಮುಸ್ತಫ, ಹಣಮಯ್ಯ ಗುತ್ತೇದಾರ್, ವಿಜಯಶ್ರೀ, ಸುಜಾತಾ, ಚಂದ್ರಕಲಾ, ಮಹಾದೇವಿ, ಮಹಾನಂದ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.