ನಟ ರಮೇಶ್ ಅರವಿಂದ್ ಗೆ ಅಭಿಮಾನಿಗಳಿಂದ ಸ್ವಾಗತ - ಸನ್ಮಾನ
ನಟ ರಮೇಶ್ ಅರವಿಂದ್ ಗೆ ಅಭಿಮಾನಿಗಳಿಂದ ಸ್ವಾಗತ - ಸನ್ಮಾನ
ಕಲಬುರಗಿ : ಖ್ಯಾತ ಸಿನಿಮಾ ನಟ ಅರವಿಂದ್ ರಮೇಶ್ ಅವರು ಸೆ. 6 ರಂದು ಕಲಬುರಗಿ ಗೆ ಆಗಮಿಸಿದ ಸಂದರ್ಭದಲ್ಲಿ ಉದ್ಯಮಿಗಳು ಹಾಗೂ ಅಭಿಮಾನಿಗಳು ಹಾರ್ದಿಕವಾಗಿ ಸ್ವಾಗತಿಸಿ ಸನ್ಮಾನಿಸಿದರು.
ನಗರದ ಹೋಟೆಲ್ ಬೃಂದಾವನ ಗ್ರಾಂಡ್ ಗೆ ಆಗಮಿಸಿದಾಗ ಉದ್ಯಮಿಗಳಾದ ವೆಂಕಟೇಶ
ಕಡೇಚೂರ್ ಶಾಲು ಹಾಗೂ ಕೃತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕರುಣೇಶ್, ಡಾ. ರಾಜೇಶ್ ಕಡೇಚೂರ್ , ಚನ್ನಬಸವ
ತೊರವಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಓಂ ಚೇಂಗಳಿ ಮತ್ತಿತರರು ಉಪಸ್ಥಿತರಿದ್ದರು.

