ಶಾಸಕರ ಭೇಟಿ ಕೇವಲ ಕಾಟಾಚಾರದ ಭೇಟಿ ಆಗಿದೆ : ಕಾಂಗ್ರೇಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಆರೋಪ

ಶಾಸಕರ ಭೇಟಿ ಕೇವಲ ಕಾಟಾಚಾರದ ಭೇಟಿ ಆಗಿದೆ : ಕಾಂಗ್ರೇಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಆರೋಪ

ಬಿಸಿದ ಭಾರಿ ಬಿರುಗಾಳಿಗೆ ಕುಸಿದ ಮನೆಗಳಿಗೆ : ಶಾಸಕ ಡಾ. ಅವಿನಾಶ ಜಾಧವ ಭೇಟಿ, ಪರಿಶೀಲನೆ

ಶಾಸಕರ ಭೇಟಿ ಕೇವಲ ಕಾಟಾಚಾರದ ಭೇಟಿ ಆಗಿದೆ : ಕಾಂಗ್ರೇಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಆರೋಪ

ಚಿಂಚೋಳಿ : ಎರಡು ದಿನದ ಹಿಂದೆ ಭಾರಿ ಬಿರುಗಾಳಿ ಜೊತೆಗೆ ಮಳೆಯಾದ ತಾಲೂಕಿನ ತುಮಕುಂಟಾ ಗ್ರಾಮಸ್ಥರ ಮನೆಗಳು ಉರುಳಿದ ಹಿನ್ನಲೆಯಲ್ಲಿ ಮನೆಗಳನ್ನು ಖುದ್ದಾಗಿ ಶಾಸಕ ಡಾ. ಅವಿನಾಶ ಜಾಧವ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಹಾನಿಯಾದ ಮನೆಗಳ ವ್ಯವಸ್ಥೆ ಪರಿಶೀಲಿಸಿದರು.

ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಗ್ರಾಮದ 7 ಮನೆಗಳು ಮತ್ತು ಚರ್ಚ್ ಮತ್ತು 18 ವಿದ್ಯುತ್ ಕಂಬಗಳು ಉರುಳಿದ್ದು, ಗ್ರಾಮಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದನ್ನು ಶಾಸಕರು ವಿಕ್ಷಿಸಿ ಖಚಿತಪಡಿಸಿಕೊಂಡರು. ಪ್ರಕೃತಿಯಿಂದ ಜನರ ಆಸ್ತಿಗಳಿಗೆ ಹಾನಿಗೊಂಡಿದೆ. ಜನರ ಕಷ್ಟಗಳಿಗೆ ಸ್ಪಂದನೆ ಮಾಡುವುದು ಸರಕಾರದ ಹೋಣೆಗಾರಿಕೆ ಮತ್ತು ಕರ್ತವ್ಯವಾಗಿದೆ. ಕೂಡಲೇ ಬಿರುಗಾಳಿಯಂದ ಮನೆಗಳು ಉರುಳಿದವರ ಮನೆ ಮಾಲೀಕರನ್ನು ಪ್ರಕೃತಿ ವಿಕೋಪದ ಅಡಿ ಪರಿಹಾರ ನೀಡಲು ಕ್ರಮಕೈಗೊಳ್ಳಿ ಎಂದು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರಿಗೆ ಸ್ಳದಲೇ ಖಡಕ್ ಸೂಚನೆಯನ್ನು ಶಾಸಕ ಡಾ. ಅವಿನಾಶ ಜಾಧವ ಅವರು ನೀಡಿದರು.

ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ತಾ. ಪಂ. ಇಒ ಸಂತೋಷ ಚವ್ಹಾಣ, ಕಂದಾಯ ನೀರಿಕ್ಷಕ ಎಂ. ಡಿ.ಆರೀಫ್, ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ, ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಂಟೆ, ಗೌತಮ್ ಪಾಟೀಲ್, ಕೆ. ಎಂ. ಬಾರಿ, ಶರಣಪ್ಪ ತಳವಾರ ಅವರು ಈ ಸಂದರ್ಭದಲ್ಲಿ ಇದ್ದರು.

• ಶಾಸಕರ ಭೇಟಿ ಕೇವಲ ಕಾಟಾಚಾರಕ್ಕೆ ನೀಡಲಾಗಿದೆ ಭೇ ಆಗಿದೆ : ಕಾಂಗ್ರೇಸ್ ವಕ್ತಾರ ಆರೋಪ

ಡಾ. ಅವಿನಾಶ ಜಾಧವ ಅವರು ಕಳೆದ 7 ವರ್ಷಗಳಿಂದ ಕ್ಷೇತ್ರದ ಶಾಸಕರಾಗಿದ್ದಾರೆ. ಹಿಂದೆ ಮೆಳೆಯಾದಗಲು ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ಆದರೆ ಭೇಟಿ ನೀಡಿದ ಯಾವಲ್ಲ ಪ್ರದೇಶದ ಅಭಿವೃದ್ಧಿ ಆಗಿವೆ ? ನಾಗಾಇದ್ಲಾಯಿ, ಹುಡದಳ್ಳಿ, ದೋಟಿಕೋಳ, ಅರ್ಣಕಲ್ ಸೇರಿ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ದುರಸ್ತಿ ಕೆಲಸಗಳು ಇವತ್ತಿಗೂ ಆಗಿಲ್ಲ. ಮಳೆಗಾಲ ಹಚ್ಚೆದಾಗಲೆಲ್ಲ ಗಾರಂಪಳ್ಳಿ, ತಾಜಲಾಪೂರ ಗ್ರಾಮಗಳ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತ ಪರಿಸ್ಥಿತಿ ಇದೆ. ಕ್ಷೇತ್ರಕ್ಕೆ ವರ್ಷಕ್ಕೆ 100 ಕೋಟಿಗೂ ಅಧಿಕ ಅನುದಾನ ಕೆಕೆಆರ್ ಡಿ.ಬಿ ಯಿಂದ ಬಿಡುಗಡೆಗೊಂಡಿರುವ ಹಣ ಶಾಸಕರ ಕಣ್ಣಿಗೆ ಸರಕಾರದ ಅನುದಾನದಂತೆ ಕಾಣಿಸುವುದಿಲ್ಲವೆ? ಇರುವ ಸರಕಾರ ನಮ್ಮದಲ್ಲ. ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಎಂದು ಕುಂಟು ನೆಪ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕಾಟಾಚಾರದ ಭೇಟಿ ನೀಡುವ ಓಡಾಟವನ್ನು ಬಿಟ್ಟು ನೈಜತೆಯಿಂದ ಜನರ ಧ್ವನಿಯಾಗಬೇಕೆಂದು ಪ್ರಕಟಣೆಯಲ್ಲಿ ಚಿಂಚೋಳಿ ಕಾಂಗ್ರೇಸ್ ವಕ್ತಾರ ಶರಣು ಪಾಟೀಲ ಮೋತಕಪಳ್ಳಿ ಅವರು ಶಾಸಕರನ್ನು ಕುಟುಕಿದ್ದಾರೆ.