ಪೂಜ್ಯ ಅನ್ನದಾನಿಯ ಕೃಪಾಪೋಷಿತ ಮಕ್ಕಳು ಅತ್ಯುನ್ನತ ಸ್ಥಾನ ಪಡೆಯುತ್ತಾರೆ - ಮಹಾದೇವಪ್ಪ ಬೇವಿನಕಟ್ಟಿ
ಪೂಜ್ಯ ಅನ್ನದಾನಿಯ ಕೃಪಾಪೋಷಿತ ಮಕ್ಕಳು ಅತ್ಯುನ್ನತ ಸ್ಥಾನ ಪಡೆಯುತ್ತಾರೆ - ಮಹಾದೇವಪ್ಪ ಬೇವಿನಕಟ್ಟಿ
ನರೇಗಲ್:ಸ್ಥಳೀಯ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನರೇಗಲ್ಲನಲ್ಲಿ ಇಂದು ನಡೆದ ಸನ್ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಯುತ ಮಹಾದೇವಪ್ಪ ಬೇವಿನಕಟ್ಟಿಯವರು ಪೂಜ್ಯ ಅನ್ನದಾನಿಯ ಕೃಪಾಪೋಷಿತ ಈ ಪುಣ್ಯ ಭೂಮಿಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದಾರೆ ಅಷ್ಟೆ ಅಲ್ಲದೆ ಇಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಪೂಜ್ಯರ ಆಶೀರ್ವಾದ ಇರುತ್ತೆ ಎಂದು ತಿಳಿಸಿದರು...ಗೌರವ ಉಪಸ್ಥಿತಿ ಅಲಂಕರಿಸಿದ್ದ ಎಸ್ ಎ ವಿ ವಿ ಪಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಆರ್ ಜೆ ದೊಡ್ಡಮೇಟಿಯವರು ಮಾತನಾಡಿ ಪ್ರಾಮಾಣಿಕತೆ ಮತ್ತು ನೈತಿಕತೆ ನಮ್ಮ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯುವ ಅಮೂಲ್ಯ ಮೌಲ್ಯಗಳು ಎಂದು ತಿಳಿಸಿದರು..ಸನ್ಮಾನಿತರಾದ ಶ್ರೀಯುತ ಜೆ ಎ ಪಾಟೀಲ್ ನಿವೃತ್ತ ಶಿಕ್ಷಕರು ಮಾತನಾಡಿ ಅಬ್ರಾಹಂ ಲಿಂಕನ್ 16 ಬಾರಿ ಸೋತು 17ನೇ ಬಾರಿ ಗೆ ಗೆದ್ದು ಅಮೇರಿಕಾದ ಅಧ್ಯಕ್ಷರಾದರು ಹಾಗೆ ಸೋಲಿನಿಂದ ಭಯ ಬೀಳದೆ ಗೆಲ್ಲುವ ಛಲವಿರಬೇಕು ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಶಾಲಾ ಸಂಸತ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಶ್ರೀಯುತ ಮಹಾದೇವಪ್ಪ ಬೇವಿನಕಟ್ಟಿ ಶ್ರೀ ಕನಕದಾಸ ಪ್ರೌಢಶಾಲೆ ಗದಗ ಮತ್ತು ನಿವೃತ್ತ ಶಿಕ್ಷಕರಾದ ಶ್ರೀಯುತ ಜೆ ಎ ಪಾಟೀಲ ಸರ್ ಅವರನ್ನು ಸನ್ಮಾನಿಸಲಾಯಿತು...ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ನೆಚ್ಚಿನ ಮುಖ್ಯೋಪಾಧ್ಯಾಯನಿರಾದ ಶ್ರೀಮತಿ ಬಿ ಜಿ ಶಿರ್ಸಿ ಅವರು ಮಾತನಾಡಿ ಶ್ರೀಯುತ ಜಿ ಕೆ ಕಾಳೆ ಹಾಗೂ ಶ್ರೀ ರವೀಂದ್ರನಾಥ ದೊಡ್ಡಮೇಟಿಯವರ ಆದಿಯಾಗಿ ಸಂಸ್ಥೆಯ ಎಲ್ಲರ ಸಹಕಾರದಿಂದ ಸುದೀರ್ಘ ಸಮಯದಿಂದ ಈ ಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡುಬರಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.. ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ವೀರಣ್ಣ ಹಳ್ಳಿಯವರು ಉಪಸ್ಥಿತರಿದ್ದರು.. ಶಿಕ್ಷಕರಾದ ಶ್ರೀ ಕೆ ಆಯ್ ಕೋಳಿವಾಡ ಪ್ರಾಸ್ತಾವಿಕ ವಾಗಿ ಮಾತನಾಡಿದರು..ಶ್ರೀಮತಿ ಗೀತಾ ಕಂಬಳಿ ಸ್ವಾಗತ ಮತ್ತು ಮಾಲಾರ್ಪಣೆ ಕಾರ್ಯಕ್ರಮದ ನಡಸಿಕೊಟ್ಟರು..ಶ್ರೀಮತಿ ಅಕ್ಕಮಹಾದೇವಿ ಅಯ್ಯನಗೌಡ್ರ ಅವರು ವಂದನಾರ್ಪಣೆ ನಡೆಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು..ಶಿಕ್ಷಕರಾದ ಶ್ರೀ ಆಯ್ ಬಿ ಒಂಟೇಲಿಯವರು ನಿರೂಪಣೆ ಮಾಡಿದರು.. ಶ್ರೀಮತಿ ವಿ ಪಿ ಗ್ರಾಮಪುರೋಹಿತ, ಶ್ರೀಮತಿ ಎಸ್ ವಿ ಹಿರೇಮಠ ,ಎಸ್ ಕೆ ಕುಲಕರ್ಣಿ,,ಎಮ್ ಎಮ್ ಸಿಳ್ಳಿನ್.,ಶ್ರೀಮತಿ ಎನ್ ಜೆ ಸಂಗನಾಳ, ಜೆ ವಿ ಕೆರಿಯವರ,, ,ಶ್ರೀಮತಿ ರಾಜೇಶ್ವರಿ ಈಟಿ, ರಜಿಯಾಬೇಗಂ,ವಿದ್ಯಾ ಮುಗಳಿ,ಜಯಶ್ರೀ ಮೆಣಸಗಿ,ಎಮ್ ಎಸ್ ಧರ್ಮಾಯತ ಶ್ರೀಮತಿ ಪದ್ಮಾವತಿ ಅಂಬಿಗೇರ ಶ್ವೇತಾ ಶಿ ಹಿರೇಮಠ, ನೇತ್ರಾ ಸೋಬಾನದ, ಗೀತಾ ಪತ್ತಾರ, ಮತ್ತು ಎಲ್ಲ ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು..
