ತಾಲೂಕ ಶಿಕ್ಷಕರ ಸಂಘದ ಉಪಾಧ್ಯಕ್ಷರಿಗೆ ಸನ್ಮಾನ
ತಾಲೂಕ ಶಿಕ್ಷಕರ ಸಂಘದ ಉಪಾಧ್ಯಕ್ಷರಿಗೆ ಸನ್ಮಾನ
ಶಹಾಪುರ : ನನಗೆ ದೊರಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಶಿಕ್ಷಕರ ಕುಂದು ಕೊರತೆಗಳಿಗೆ ಸ್ಪಂದಿಸಿ,ನ್ಯಾಯಕ್ಕಾಗಿ ಹೋರಾಡುವುದರ ಜೊತೆಗೆ ಶಿಕ್ಷಕರ ಸಂಘದ
ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷರಾದ ಶೇಖಮ್ಮ ಎಂ.ಸಜ್ಜನ್ ಹೇಳಿದರು.
ತಾಲೂಕಿನ ಕನ್ಯಾಕೊಳ್ಳೂರು ಗ್ರಾಮದ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಹೊಸಮನಿ ಅವರ ಗೃಹದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ನಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಸಜ್ಜನ್, ದುರ್ಗೇಶ್,ಮೀನಾಕ್ಷಿ ಹೊಸಮನಿ ದೇವಕ್ಕಿ,ಬಸ್ಸಮ್ಮ ರೇಣುಕಾ,ಶರಣಮ್ಮಜೊತೆಗೆ ಇನ್ನಿತರರು ಉಪಸ್ಥಿತರಿದ್ದರು.
