ಶರಣಸಿರಸಗಿಯ ಶಿವಶರಣಪ್ಪ ಸುಭೇದಾರ ನಿಧನ

ಶರಣಸಿರಸಗಿಯ ಶಿವಶರಣಪ್ಪ ಸುಭೇದಾರ ನಿಧನ

 ಶರಣಸಿರಸಗಿಯ ಶಿವಶರಣಪ್ಪ ಸುಭೇದಾರ ನಿಧನ

ಕಲಬುರಗಿ:ಸತಾಲೂಕಿನ ಶರಣಸಿರಸಗಿ ಗ್ರಾಮದ ನಿವಾಸಿ ಶಿವಶರಣಪ್ಪ (ಶರಣು) ಸುಭೇದಾರ (61 ) ಶುಕ್ರವಾರ (ಜುಲೈ 17) ಮಧ್ಯಾಹ್ನ 2:30 ಕ್ಕೆ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ .

ಮೃತರ ಅಂತ್ಯಕ್ರಿಯೆಯು (ಶನಿವಾರ, ಜುಲೈ 18) ಮಧ್ಯಾಹ್ನ 2:00 ಗಂಟೆಗೆ ಶರಣಸಿರಸಗಿ ಗ್ರಾಮದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ ಸೂಚನೆ:

ಶಿವಶರಣಪ್ಪ ಸುಭೇದಾರ ಅವರ ನಿಧನಕ್ಕೆ ನಂದಿಕುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಪವನಕುಮಾರ ಬಿ. ವಳಕೇರಿ ಹಾಗೂ ಶ್ರೀ ಗುರು ವಿದ್ಯಾಪೀಠದ ಮುಖ್ಯಸ್ಥರಾದ ಶಿವರಾಜ ವಿ. ಡಿಗ್ಗಾವಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಕೋರಿದ್ದಾರೆ

.