ಒಸಡು ಕಸಿ ಉಚಿತ ಚಿಕಿತ್ಸಾ ಶಿಬಿರ

ಒಸಡು ಕಸಿ ಉಚಿತ ಚಿಕಿತ್ಸಾ ಶಿಬಿರ

ಒಸಡು ಕಸಿ ಉಚಿತ ಚಿಕಿತ್ಸಾ ಶಿಬಿರ

ಕಲಬುರಗಿ : ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ದೆಯ ಪೆರಿಯೋಡಾಂಟಾಲಜಿ ಮತ್ತು ಇಂಪ್ಲಾಂಟಾಲಜಿ ವಿಭಾಗದ ವತಿಯಿಂದ ಒಸಡು ಹಿಂದೆ ಸರಿಯುವ ಮತ್ತು ಕುಗ್ಗುವ ಸಮಸ್ಯೆ ಇರುವ ರೋಗಿಗಳಿಗಾಗಿ ಇದೆ ಜುಲೈ 20 ರಿಂದ 31 ಜುಲೈ 2026 ರ ವರೆಗೆ ವಸಡು ಕಸಿ ಚಿಕಿತ್ಸಾ ಶಿಬಿರವನ್ನು ಸೇಡಂ ರಸ್ತೆಯ ದಂತ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಚಾರ್ಯರಾದ ಡಾ ಜಯಶ್ರೀ ಮುದ್ದಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಹಲ್ಲಿನ ಬೇರುಗಳನ್ನು ರಕ್ಷಿಸಲು ಹಲ್ಲುಗಳ ಸೂಕ್ಷ್ಮತೆಯನ್ನು ಕಡಿಮೆ ಮಾಡಲು ಮತ್ತು ನಗುವಿನ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕವಾಗುವ ಸರಳ ಚಿಕಿತ್ಸೆ ಯಾಗಿದ್ದು ಅರ್ಹ ರೋಗಿಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಇದು ಸೀಮಿತ ಅವಕಾಶವಿದ್ದು ಮುಂಚಿತವಾಗಿ ನೊಂದಾಯಿಸಿಕೊಳ್ಳಬೆಕೆಂದು ಅವರು ತಿಳಿಸಿದ್ದಾರೆ