'ಕಾ ನಿ ಪ' ದ್ವನಿ ಸಂಘ: ಗದಗ ಜಿಲ್ಲಾಧ್ಯಕ್ಷರಾಗಿ ಅಂದಪ್ಪ ಮಾದರ್, ಉಪಾಧ್ಯಕ್ಷರಾಗಿ ಮಂಜುನಾಥ್ ಹೂವಿನಾಳ ಆಯ್ಕೆ
'ಕಾ ನಿ ಪ' ದ್ವನಿ ಸಂಘ: ಗದಗ ಜಿಲ್ಲಾಧ್ಯಕ್ಷರಾಗಿ ಅಂದಪ್ಪ ಮಾದರ್, ಉಪಾಧ್ಯಕ್ಷರಾಗಿ ಮಂಜುನಾಥ್ ಹೂವಿನಾಳ ಆಯ್ಕೆ.
ಗದಗ ಜಿಲ್ಲಾ 'ಕಾ ನಿ ಪ' ದ್ವನಿ ಸಂಘಕ್ಕೆ ನೂತನ ಸಾರಥಿಗಳು: ಅಧ್ಯಕ್ಷರಾಗಿ ಅಂದಪ್ಪ ಮಾದರ್, ಉಪಾಧ್ಯಕ್ಷರಾಗಿ ಮಂಜುನಾಥ್ ಹೂವಿನಾಳ ಆಯ್ಕೆ
"ಕರ್ನಾಟಕ ರಾಜ್ಯ ಪತ್ರ ಕರ್ತರ (ಕಾ.ನಿ.ಪ.) ದ್ವನಿ ಸಂಘದ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಯಶಸ್ವಿಯಾಗಿ ನಡೆದಿದೆ. ಸಂಘದ ಜಿಲ್ಲಾಧ್ಯಕ್ಷರಾಗಿ ಅಂದಪ್ಪ ಮಾದರ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಮಂಜುನಾಥ್ ಹೂವಿನಾಳ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ
ಈ ವೇಳೆ ಗದಗ ಜಿಲ್ಲಾ 'ಕಾ.ನಿ.ಪ.' ದ್ವನಿ ಸಂಘದ ಜಿಲ್ಲಾಧ್ಯಕ್ಷರಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿ, ನನ್ನ ಮೇಲೆ ನಂಬಿಕೆ ಇಟ್ಟಿರುವ ಸಂಘದ ಎಲ್ಲಾ ಹಿರಿಯ ಮತ್ತು ಕಿರಿಯ ಸದಸ್ಯರಿಗೆ ನಾನು ಸದಾ ಆಭಾರಿಯಾಗಿದ್ದೇನೆ. ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗುವ ಈ ಜವಾಬ್ದಾರಿಯನ್ನು ನಾನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಮಾತನಾಡಿದರು
ಇದೇ ಸಮಯದಲ್ಲಿ ಉಪಾಧ್ಯಕ್ಷರಾಗಿ ಮಂಜುನಾಥ್ ಹೂವಿನಾಳ ರವರು "ಗದಗ ಜಿಲ್ಲಾ 'ಕಾ.ನಿ.ಪ.' ದ್ವನಿ ಸಂಘದ ನೂತನ ಉಪಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿ, ಈ ಜವಾಬ್ದಾರಿಯನ್ನು ವಹಿಸಿರುವ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ನನ್ನ ಧನ್ಯವಾದಗಳು.
ನನ್ನ ಆಯ್ಕೆ ಕೇವಲ ಒಂದು ಹುದ್ದೆಯಲ್ಲ, ಅದು ಪತ್ರಕರ್ತರ ಹಿತಕ್ಕಾಗಿ ಸೇವೆ ಸಲ್ಲಿಸಲು ಸಿಕ್ಕಿರುವ ಒಂದು ಸುಸಂದರ್ಭ ಎಂದು ಭಾವಿಸುತ್ತೇನೆ. ಈ ಜವಾಬ್ದಾರಿಯನ್ನು ಅರಿತು, ಅಧ್ಯಕ್ಷರಾದ ಶ್ರೀ ಅಂದಪ್ಪ ಮಾದರ್ ಅವರ ಮಾರ್ಗದರ್ಶನದಲ್ಲಿ ನಾನು ಕಾರ್ಯನಿರ್ವಹಿಸುತ್ತೇನೆ ಎಂದು ಮಾತನಾಡಿದರು
ಈ ಸಮಯದಲ್ಲಿ ಗದಗ್ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
