ನರೇಗಲ್ಲ ನಲ್ಲಿ ಬಿಳಿ ಎತ್ತು ಕರಿ ಹರಿದವು.
ನರೇಗಲ್ಲ ನಲ್ಲಿ ಬಿಳಿ ಎತ್ತು ಕರಿ ಹರಿದವು.
ಕಲ್ಯಾಣ ಕಹಳೆ ನರೇಗಲ್ಲ.ಅಗಸಿಯ ಬಿಳಿ ಎತ್ತು ಕರಿ ಹರಿಯಿತು.
ಕರಿ ಹರಿಯುವ ಸಂಪ್ರದಾಯಿಕ ಆಚರಣೆ ನೆರವೇರಿಸಲಾಯಿತು. ಕಂದು ಬಣ್ಣದ ಎತ್ತು ಕರಿ ಹರಿದ್ರ ಮುಂಗಾರು ಜೋರಾಗತೈತಿ, ಬೆಳೆ ಎತ್ತು ಕರಿ ಹರಿದ್ರ ಹಿಂಗಾರು ಜೋರಾಗತೈತಿ ಎನ್ನುವ ರೈತರ ಬಲವಾದ ನಂಬಿಕೆಯಂತೆ ,ಕಾರ ಹುಣ್ಣಿಮೆ ನಿಮಿತ್ತ ಪಟ್ಟಣದ ಅಗಸಿಬಾಗಿಲು ಸಂತೆ ಬಜಾರ ಹತ್ತಿರ ಈ ಬಾರಿ ಪಟ್ಟಣದ ಹೊಸಪೇಟೆ ಓಣಿಯ ಶಿವಪುತ್ರಪ್ಪ ಒಳಕೋಟಿ ಅವರ ಹೋರಿ (ಎತ್ತು) ಕರಿ ಹರಿಯುವ ಮೂಲಕ ರೈತರ ನಂಬಿಕೆಗೆ ಸಾಕ್ಷಿಯಾಯಿತು.
ರೈತರು ಉಳುಮೆಗಾಗಿ ಎತ್ತುಗಳನ್ನು ಗಳೆ ಕಟ್ಟುತ್ತಾರೆ. ದೇಶಕ್ಕೆ ರೈತ ಬೆನ್ನೆಲುಬಾದರೆ, ರೈತನಿಗೆ ಎತ್ತುಗಳೇ ಬೆನ್ನೆಲುಬಾಗಿದ್ದು, ಅವುಗಳನ್ನು ಕಾರ ಹುಣ್ಣಿಮೆಯ ದಿನ ಊರೆಲ್ಲಾ ಪ್ರದರ್ಶಿಸುವುದು ರೈತನಿಗೆ ಹೆಮ್ಮೆಯ ಸಂಗತಿ. ಪಟ್ಟಣದಲ್ಲಿ ಸೋಮವಾರ ಸಂಜೆ ಕಾರ ಹುಣ್ಣಿಮೆ ಸಂಭ್ರಮ, ರೈತರು ಎತ್ತುಗಳಿಗೆ ವಿವಿಧ ಬಣ್ಣಗಳ ಅಲಂಕಾರ. ಗೊಂಡೆ. ಮಘಡಾ, ಮೂಗುದಾರ, ಗೆಜ್ಜೆ, ಜೂಲಾ, ಬಾಸಿಂಗ ಸೇರಿದಂತೆ ಇನ್ನೂ ಹಲವಾರು ರೀತಿಯ ಶೃಂಗಾರ ಮಾಡಿದ್ದರು. ನಂತರ ಸ್ಥಳೀಯ ರೈತ ಸಮುದಾಯದ ವತಿಯಿಂದ ಗ್ರಾಮ ದೇವರಿಗೆ ಶೃಂಗರಿಸಲಾದ ಎತ್ತುಗಳಿಗೆ ಪೂಜೆ, ಆರತಿ ಪೂಜೆ ಸಲ್ಲಿಸಿದರು.
ಕರಿ ಹರಿದು ವಿಜಯಶಾಲಿಯಾದ ಬಿಳಿ ಎತ್ತಿಗೆ ಓಂ ಶಿಕ್ಷಣ ಸಂಸ್ಥೆಯ ವತಿಯಿಂದ ನಗೆದುಬಹುಮಾನ ವಿತರಿಸಿ ಸನ್ಮಾನಿಸಲಾಯಿತು.. ಅಶೋಕ ಬೇವಿನಕಟ್ಟಿ, ಶೇಕರಗೌಡ ಪಾಟೀಲ, ಕಳಕನಗೌಡ ಲಕ್ಕನಗೌಡ್ರ, ಯಲ್ಲಪ್ಪ ಜುಟ್ಲ, ಶಶಿಧರ ಓದುಸಮಠ, ಚೇತನ ಬೊಮ್ಮನಹಳ್ಳಿ, ಶರಣಪ ಕಲಾಲಬಂಡಿ, ವೀರಬಸಪ್ಪ ಲಕ್ಕನಗೌಡ, ಶರಣಪ್ಪ ಕಡೆತೋಟದ, ಜಗದೀಶ ಹೊನವಾಡ, ಅರವಿಂದ ಕಡೇತೋಟದ, ಬಸವರಾಜ ಹೊನವಾಡ, ಶರಣಯ್ಯ ಸಂಶಿಮಠ ಸ್ಥಳೀಯ ರೈತರು ಇದ್ದರು.
*ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*
