ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಸ್ಥಾನ ನೀಡುವಂತೆ : ಶಾಂತರೆಡ್ಡಿ ಪೆಟಶೀರೂರ ಒತ್ತಾಯ
ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಸ್ಥಾನ ನೀಡುವಂತೆ : ಶಾಂತರೆಡ್ಡಿ ಪೆಟಶೀರೂರ ಒತ್ತಾಯ
ಕಲಬುರ್ಗಿ,ಅಭಿವೃದ್ಧಿ ಮತ್ತು ಯುವ ಶಕ್ತಿಗೆ ಪ್ರೇರಣೆ ನೀಡುತ್ತಿರುವ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಹೊಸ ಕನಸುಗಳನ್ನು ನಿರ್ಮಾಣಗೊಳಿಸುವ ಸ್ಪೊರ್ತಿದಾಯಕ ನಮ್ಮೆಲ್ಲರ ನೆಚ್ಚಿನ ನಾಯಕ ಸನ್ಮಾನ್ಯ ಶ್ರೀ
ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು
ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆಡಳಿತ ಮಂಡಳಿ ಸದಸ್ಯ & ಶ್ರೀ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಶಾಂತರೆಡ್ಡಿ ಪೆಟಶೀರೂರ ಒತ್ತಾಯಿಸಿದ್ದಾರೆ.
ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಯುವಕರ ಆಶಯಗಳಿಗೆ ಬಲ ತುಂಬುವ ಅವರು ಜನಪರ ಆಡಳಿತ, ಸಾಮಾಜಿಕ ಕಾಳಜಿ ಹಾಗೂ ಪಕ್ಷ ಸಂಘಟನೆಯಲ್ಲಿ ಸಲ್ಲಿಸಿರುವ ಸೇವೆಯಿಂದ ರಾಜ್ಯದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಶಾಂತರೆಡ್ಡಿ ಪೆಟ್ವಶೀರೂರ ಅಭಿಪ್ರಾಯಪಟ್ಟರು.
ಉಪ ಮುಖ್ಯಮಂತ್ರಿ ಸ್ಥಾನ ದೊರೆತಲ್ಲಿ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದ್ದು, ಯುವಕರಿಗೆ ಇನ್ನಷ್ಟು ಪ್ರೋತ್ಸಾಹ ಮತ್ತು ನಮ್ಮ ಭಾಗದ ಧ್ವನಿಗೆ ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಶಾಂತರೆಡ್ಡಿ ಪೆಟ್ವಶೀರೂರ ವಿಶ್ವಾಸ ವ್ಯಕ್ತಪಡಿಸಿದರು.
