ಜಿಲ್ಲಾ ಬಂಜಾರ-ಲಂಬಾಣಿ ನ್ಯಾಯವಾದಿಗಳ ಸಂಘದ ನೂತನ ಘಟಕ ರಚನೆ
ಜಿಲ್ಲಾ ಬಂಜಾರ-ಲಂಬಾಣಿ ನ್ಯಾಯವಾದಿಗಳ ಸಂಘದ ನೂತನ ಘಟಕ ರಚನೆ
ಕಲಬುರಗಿ, ಮೇ 26: ಕರ್ನಾಟಕ ಪ್ರದೇಶ ಬಂಜಾರ-ಲಂಬಾಣಿ ಸೇವಾ ಸಂಘ, ಬೆಂಗಳೂರು ಆಶ್ರಯದಲ್ಲಿ ಕಲಬುರಗಿ ಜಿಲ್ಲಾ ಬಂಜಾರ-ಲಂಬಾಣಿ ನ್ಯಾಯವಾದಿಗಳ ಸಂಘದ ನೂತನ ಘಟಕವನ್ನು ರಚಿಸಲಾಯಿತು.
ನಗರದಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ಬಿ. ನಾಯಕ್ ಅವರ ಅಧ್ಯಕ್ಷತೆಯಲ್ಲಿ ಹಾಜರಿದ್ದ ನ್ಯಾಯವಾದಿಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಜಿಲ್ಲಾಧ್ಯಕ್ಷರಾಗಿ ಕಮಲ್ ರಾಠೋಡ್, ಗೌರವಾಧ್ಯಕ್ಷರಾಗಿ ಬಾಬುರಾವ್ ಜಾಧವ್, ಉಪಾಧ್ಯಕ್ಷರಾಗಿ ಆರತಿ ರಾಠೋಡ್ ಹಾಗೂ ಹಿರಾಲಾಜ್ ಚೌವ್ಹಾಣ್, ಪ್ರಧಾನ ಕಾರ್ಯದರ್ಶಿಯಾಗಿ ಚಿಂದು ರಾಠೋಡ್, ಸಹ ಕಾರ್ಯದರ್ಶಿಯಾಗಿ ವಿನೋದ್ ಡಿ. ಚೌವ್ಹಾಣ್, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಂದ್ರ ಎಂ. ಚೌವ್ಹಾಣ್ ಹಾಗೂ ಖಜಾಂಚಿಯಾಗಿ ಹಿಂದೂಧರ್ ಜಾಧವ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷ ಬಿ.ಬಿ. ನಾಯಕ್ ಮಾತನಾಡಿ, ನೂತನ ಪದಾಧಿಕಾರಿಗಳು ಸಂಘದ ಧ್ಯೇಯೋದ್ದೇಶಗಳನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಪಾಲಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳು, ಪ್ರತಿಭಟನೆಗಳು ಹಾಗೂ ಸಂಘಟಿತ ಚಟುವಟಿಕೆಗಳ ಮೂಲಕ ಒಂದಾಗಿ ಕಾರ್ಯನಿರ್ವಹಿಸಿ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಅವರು ಸಲಹೆ ನೀಡಿದರು.
ಸಮಾಜದ ಸರ್ವತೋಮುಖ ಅಭಿವೃದ್ಧಿಯೇ ಸಂಘದ ಪ್ರಮುಖ ಗುರಿಯಾಗಿದ್ದು, ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ನೂತನ ಪದಾಧಿಕಾರಿಗಳ ಆಯ್ಕೆಗೆ ಸಮಾಜದ ಮುಖಂಡರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದರು.
