ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ನಾಗರಾಜ್ ದಂಡಾವತಿ ವರದಿ ಶಹಾಬಾದ : - ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮಕ್ಕೆ ಹೋಗುವ ರಾಜ್ಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದರು, ಸಹ ಜನಪ್ರತಿನಿಧಿಗಳು, ಅಧಿಕಾರಿಗಳು ಕೇವಲ ಅಶ್ವಾಸನೆ ನೀಡುತ್ತಿದ್ದುದ್ದರಿಂದ ಗ್ರಾಮಸ್ಥರು ಬೆಳಗ್ಗೆ ೧೦.೩೦ ರಿಂದ ರಸ್ತೆ ಮಧ್ಯೆ ಕುಳಿತು ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು. 

ಪ್ರತಿಭಟನಾಕಾರರು ರಸ್ತೆ ತೆಗ್ಗುಗಳ ಕುರಿತು ಆಕ್ರೋಶ ವ್ಯಕ್ತಪಡಿಸುತ್ತ ಕಳೆದ ಹಲವಾರು ವರ್ಷಗಳಿಂದ ಸಂಪೂರ್ಣ ಕೆಟ್ಟು ಹೋಗಿರುವ ಜೇವರ್ಗಿ, ಶಹಾಬಾದ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದು, ಭಾರಿ ಪ್ರಮಾಣದ ತೆಗ್ಗುಗಳು ಬಿದ್ದಿವೆ, ಹಲವಾರು ಬಾರಿ ರಸ್ತೆ ಮಧ್ಯದಲ್ಲಿ ಬಸ್‌ನ ಹಿಂದಿನ, ಮುಂದಿನ ಭಾಗ ತೆಗ್ಗಿನ ಮೇಲ್ಪಾಗದಲ್ಲಿ ಸಿಕ್ಕು, ಚಕ್ರಗಳು ನೆಲ ಕಾಣದೆ ಸಿಕ್ಕಿಬಿದ್ದ ಅನೇಕ ಉದಾಹರಣೆಗಳು ಇವೆ, ಹಲವಾರು ಬಾರಿ ನಿಯೋಗದೊಂದಿಗೆ, ಪ್ರತಿಭಟನೆ ಮೂಲಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ, ತಾಲೂಕ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳಿಗೆ ಶಾಸಕರಿಗೆ, ಸಚಿವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗದೆ ಇದ್ದು, ಕೇವಲ ಅಶ್ವಾಸನೆ ನೀಡಿ ಹೋಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. 

ಗ್ರಾಮದ ಬಳಿ ರಸ್ತೆ ಮಧ್ಯೆ ಟೆಂಟ ಹಾಕಿಕೊಂಡು ಭಜನೆ ಮಾಡುತ್ತ, ಧರಣಿ ಕುಳಿತು, ರಸ್ತೆ ಮಧ್ಯೆ ಟೈರ್, ಕಟ್ಟಿಗೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. 

ಸ್ಥಳಕ್ಕೆ ಆಗಮಿಸಿದ ತಾಲೂಕ ತಹಶೀಲ್ದಾರ ನೀಲಪ್ರಭ ಬಬಲಾದ, ಪಿಐ ಪರಶುರಾಮ ವನಂಜಕರ ಅವರು ಲೋಕೋಪಯೊಗಿ ಇಲಾಖೆ ಜೆಇ ಅವರೊಂದಿಗೆ ಆಗಮಿಸಿ, ರಸ್ತೆ ಕಾಮಗಾರಿ ಕುರಿತು ಕಡತ ಪ್ರಗತಿಯಲ್ಲಿದ್ದು, ಜಿಲ್ಲಾಧಿಕಾರಿಗಳು ಹೊಸದಾಗಿ ಬಂದಿದ್ದರಿಂದ ಗ್ರಾಮಸ್ಥರ ನಿಯೋಗ ಬಂದರೆ, ಜಿಲ್ಲಾಧಿಕಾರಿಗಳನ್ನು ಭೇಟ್ಟಿ ಮಾಡಿಸುವದಾಗಿ ಹೇಳಿದರು. 

ತಹಶೀಲ್ದಾರರ ಮನವಿಗೆ ಒಪ್ಪದ ಪ್ರತಿಭಟನಾಕಾರರು ಈ ಹಿಂದೆ ತಮಗೂ, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಹಿಂದಿನ ಜಿಲ್ಲಾಧಿಕಾರಿಗಳು ಕೇವಲ ೧೫ ದಿನಗಳನ್ನು ರಸ್ತೆ ಕಾಮಗಾರಿ ಪ್ರಾರಂಭಿಸುವದಾಗಿ ಆಶ್ವಾಸನೆ ನೀಡಿ, ೬ ತಿಂಗಳಾದರು ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ, ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಭರವಸೆ ನೀಡಿದಾಗ ಮಾತ್ರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗುವದು ಎಂದು ಸ್ಷಷ್ಪಪಡಿಸಿದರು.  

ಪ್ರತಿಭಟನೆಯಲ್ಲಿ ಬಸವರಾಜ ಗೊಳೇದ, ಬಸವರಾಜ ಮದ್ರಕಿ, ಬೆಳ್ಳಪ್ಪ ಖಣದಾಳ, ಮಲ್ಲಣ್ಣ ಮರತೂರ, ನಾಗೇಂದ್ರ ಹುಗ್ಗಿ, ಭೀಮರಾವ ಹೂಗಾರ, ಸಿದ್ದು ಸಜ್ಜನ, ಅಲ್ಲಮಪ್ರಭು ಮಂಗಳೂರ, ಮರಲಿಂಗ ಹುಗ್ಗಿ, ಅಲ್ಲಾಭಕ್ಷ ಜಮಾದಾರ, ಮಂಜುನಾಥ ಇಟಗಿ, ಅಂಬರೀಷ ಕಲಬುರಗಿ, ಮಹೇಶ ಬಂದಳ್ಳಿ, ಮಲ್ಲು ಗೊಳೇದ, ಪ್ರಶಾಂತ ರಾಮಶೆಟ್ಟಿ, ಶಹಾಬಾದ್‌ನ ನಾಗಣ್ಣ ರಾಂಪೂರೆ ಸೇರಿದಂತೆ ನೂರಾರು ಜನ ಗ್ರಾಮಸ್ಥರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.