ಹಿಂದೂ ಸಮಾವೇಶ ಯಶಸ್ವಿಗೆ ಶ್ರಮಿಸಿ - ವೀರಭದ್ರಯ್ಯ ಸ್ವಾಮಿ.

ಹಿಂದೂ ಸಮಾವೇಶ ಯಶಸ್ವಿಗೆ ಶ್ರಮಿಸಿ - ವೀರಭದ್ರಯ್ಯ ಸ್ವಾಮಿ.

ಹಿಂದೂ ಸಮಾವೇಶ ಯಶಸ್ವಿಗೆ ಶ್ರಮಿಸಿ - ವೀರಭದ್ರಯ್ಯ ಸ್ವಾಮಿ.

ಶಹಾಪುರ : ಮೇ 18 ರಂದು ಶಹಾಪುರ ಪಟ್ಟಣದ ಸಿಪಿಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶ ಯಶಸ್ವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ವೀರಭದ್ರಯ್ಯ ಸ್ವಾಮಿ ಹಯ್ಯಾಳ ಕರೆ ನೀಡಿದ್ದಾರೆ.

ಹಿಂದೂ ಸಮಾವೇಶದಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸು ನಮ್ಮೆಲ್ಲರ ಒಗ್ಗಟ್ಟು ಮತ್ತು ಸಹಕಾರವನ್ನು ಸೂಚಿಸುತ್ತದೆ, ಜೊತೆಗೆ ಹಿಂದುಗಳು ನಾವೆಲ್ಲ ಒಂದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿ ಜಾಗೃತಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರ ಸಹಕಾರ ಮತ್ತು ಸಕ್ರಿಯ ಭಾಗಿತ್ವ ಅತ್ಯಂತ ಮುಖ್ಯವಾಗಿದ್ದು,ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಸಮಾವೇಶ ಯಶಸ್ವಿಗೊಳ್ಳಬೇಕಾದರೆ ಪ್ರತಿಯೊಬ್ಬರೂ ಹಿಂದುಗಳು ಒಂದಾಗಬೇಕಾಗಿದೆ ಎಂದು ಹೇಳಿದರು.