ಮುಂದಿನ ವರ್ಷ ಕೆ.ಬಿ ಶಾಣಪ್ಪ ನವರ ಜನ್ಮದಿನದಂದು ಪುತ್ಥಳಿ ನಿರ್ಮಾಣ: ಪುತ್ರ ಅಶೋಕ ಕೆ.ಬಿ ಅಭಿಪ್ರಾಯ

ಮುಂದಿನ ವರ್ಷ ಕೆ.ಬಿ ಶಾಣಪ್ಪ ನವರ ಜನ್ಮದಿನದಂದು ಪುತ್ಥಳಿ ನಿರ್ಮಾಣ: ಪುತ್ರ ಅಶೋಕ ಕೆ.ಬಿ ಅಭಿಪ್ರಾಯ

ಮುಂದಿನ ವರ್ಷ ಕೆ.ಬಿ ಶಾಣಪ್ಪ ನವರ ಜನ್ಮದಿನದಂದು ಪುತ್ಥಳಿ ನಿರ್ಮಾಣ: ಪುತ್ರ ಅಶೋಕ ಕೆ.ಬಿ ಅಭಿಪ್ರಾಯ

ಕಲಬುರಗಿ: ನಗರದ ಶಾಹಬಾದ ರಸ್ತೆಯ ನೃಪತುಂಗ ಕಾಲೋನಿಯ ಉದ್ಯಾನವನದಲ್ಲಿ ಅಜಾತಶತ್ರು,ಮಾಜಿ ಸಚಿವರು,ಹಾಗೂ ಮಾಜಿ ರಾಜ್ಯಸಭಾ ಸಂಸದರಾದ ಕೆ.ಬಿ.ಶಾಣಪ್ಪಾ ನವರ 88ನೇ ಜನ್ಮದಿನ ಅಂಗವಾಗಿ ಕೆ.ಬಿ.ಶಾಣಪ್ಪ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಪುತ್ರ ಅಶೋಕ ಕೆಬಿ ಮಾತನಾಡಿ,ಮುಂದಿನ ವರ್ಷ ಮೇ 16ರಂದು ನಮ್ಮ ತಂದೆಯವರ ಪುತ್ಥಳಿಯನ್ನು ನೃಪತುಂಗ ಕಾಲೋನಿಯ ಉದ್ಯಾನವನದಲ್ಲಿ ನಿರ್ಮಾಣ ಮಾಡಲು ಕುಟುಂಬ ಸದಸ್ಯರು,ಆಭಿಮಾನಿಗಳು ಹಾಗೂ ಹಿತೈಷಿಗಳು ಒಲವು ತೋರಿದ್ದಾರೆ ಎಂದು ಅವರು ಹೇಳಿದರು.

  ನಂತರ ಕೇಂದ್ರ ಬಸ್ ನಿಲ್ದಾಣದಲ್ಲಿ ಕೆ.ಬಿ.ಶಾಣಪ್ಪನವರ 88ನೇ ಜನ್ಮದಿನಾಚರಣೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಕೆ.ಬಿ.ಶಾಣಪ್ಪ ನವರ ಧರ್ಮಪತ್ನಿ ಜಮಲಮ್ಮ, ವಿಜಯಲಕ್ಷ್ಮೀ ನಾಗೇಶ,ಎ.ಎಚ್.ನಾಗೇಶ,ದೇವೆಂದ್ರ ಸಂಗೆಪ್ಪ ಸೊಲ್ಲಾಪೂರ,ಮಂಜುನಾಥ ನಾಲವಾರಕರ್, ಮಲ್ಲಿಕಾರ್ಜುನ ದೊಡ್ಡಮನಿ,ಜೈರಾಜ ಕಿಣಗಿಕರ್, ಪಾಯಣ್ಣಾ ಹಿಪ್ಪರಗಿ, ದೇವೆಂದ್ರ ಬಿಳ್ವಾರ ಸೇರಿದಂತೆ ಇತರರು ಇದ್ದರು.