ನೀಟ್ ಪರೀಕ್ಷೆಯ ಪೇಪರ ಲೀಕ್: ಖಂಡನೀಯ
ನೀಟ್ ಪರೀಕ್ಷೆಯ ಪೇಪರ ಲೀಕ್: ಖಂಡನೀಯ
ಕಲಬುರಗಿ: ನೀಟ್ ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಯನ್ನು ಸೂಸುತ್ರವಾಗಿ ನಡೆಸಲು ವಿಫಲವಾಗಿರುವ ಕೇಂದ್ರ ಸರಕಾರದ ವೈಫಲ್ಯವನ್ನು ಕನ್ನಡಪರ ಹೋರಾಟಗಾರ ಆನಂದ ತೆಗನೂರ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ವೈಧ್ಯಕೀಯ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವ ಈ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯನ್ನು ಲಕ್ಷಾಂತರ ವಿದ್ಯಾರ್ಥಿಗಳು ಬರೆಯುತ್ತಾರೆ.ಇಂತಹ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಇಡೀ ಶುಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತದೆ.ಅಲ್ಲದೇ ಪರೀಕ್ಷೆ ಮುಗಿದು ನಿರಾಳರಾಗಿದ್ದ ವಿದ್ಯಾರ್ಥಿಗಳ ಮೇಲೆ ಮತ್ತೆ ಮಾನಸಿಕ ಒತ್ತಡ ಬೀಳುತ್ತದೆ ಎಂದರು.ಸಿಬಿಎಸ್.ಸಿ ಪರೀಕ್ಷೆ,ನೀಟ ಪರೀಕ್ಷೆ ಸೇರಿದಂತೆ ಅನೇಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ ದೊಡ್ಡ ವ್ಯಕ್ತಿಗಳು ಶ್ರೀಮಂತರ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರಕಾರದವರೇ ಪತ್ರಿಕೆಯನ್ನು ಮಾಡಿಸಿರುತ್ತಾರೆ.ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಎಂದು ಅವರು ಆರೋಪಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿರುವ ಮಾಫಿಯಾವನ್ನು ಹೊರಗೆಳೆಯಬೇಕು.ಮಕ್ಕಳ ಜೀವನ ಜೊತೆ ಚೆಲ್ಲಾಟವಾಡುತ್ತಿರುವ ದಂಧೆಕೋರರನ್ನು ಬಂಧಿಸಿ,ಶಿಕ್ಷೆಗೆ ಗುರಿ ಪಡಿಸುವ ಪ್ರಮಾಣಿಕ ಪ್ರಯತ್ನವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಡಬೇಕು.ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು,ಮುಕ್ತ ನ್ಯಾಯಸಮ್ಮತ ತನಿಖೆ ನಡೆಯಬೇಕು.ಯಾರೇ ತಪ್ಪಿತಸ್ಥರು ಯಾರೇ ಆಗಿದ್ದರು ಬಿಡಬಾರದು ಎಂದು ಅವರು ಆಗ್ರಹಿಸಿದರು.
ನಾವು ಕೂಡಾ ವೈದ್ಯಕೀಯ ಶಿಕ್ಷಣ ಪಡೆಯಬಹುದು ಎಂಬ ಕನಸಿನೊಂದಿಗೆ ವಿದ್ಯಾರ್ಥಿಗಳು ಹಗಲು-ರಾತ್ರಿ ಅಭ್ಯಾಸ ಮಾಡುತ್ತಾರೆ.ಪಾರದರ್ಶಕವಾಗಿ ಪರಿಕ್ಷೆ ನಡೆಯುತ್ತದೆ ಎಂದು ನಿರೀಕ್ಷಿಸುತ್ತಾರೆ.ಆದರೆ ಪತ್ರಿಕೆಯ ಸೋರಿಕೆಯಿಂದ ಪರೀಕ್ಷಾ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅಪನಂಬಿಕೆ ಸೃಷ್ಟಿಯಾಗುತ್ತದೆ.ಪರೀಕ್ಷೆ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಬೇರೆ ಬೇರೆ ರಾಜ್ಯಗಳಲ್ಲಿ ನಡೆಯವ ಸಣ್ಣ ಪುಟ್ಟ ಘಟನೆಗಳ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರು,ಪ್ರತಿಷ್ಠಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತುಟಿ ಬಿಚ್ಚಿಲ್ಲ ಏಕೆ? ವೈದ್ಯರಾಗುವ ಬಗ್ಗೆ ಕಾಳಜಿ ಇಲ್ಲವೇ ? ಎಂದು ಅವರು ಪ್ರಶ್ನಿಸಿದರು.
