ಬಗರ್ ಹುಕ್ಕುಂ ಸಾಗುವಳಿ ಅರ್ಜಿಗಳ ಇತ್ಯಾರ್ಥಕ್ಕೆ ಕೂಡಲೇ ಸಭೆ ನಡೆಸಲು : ಶಾಸಕರಿಗೆ ಮನವಿ ಸಲ್ಲಿಕೆ
ಬಗರ್ ಹುಕ್ಕುಂ ಸಾಗುವಳಿ ಅರ್ಜಿಗಳ ಇತ್ಯಾರ್ಥಕ್ಕೆ ಕೂಡಲೇ ಸಭೆ ನಡೆಸಲು : ಶಾಸಕರಿಗೆ ಮನವಿ ಸಲ್ಲಿಕೆ
ಚಿಂಚೋಳಿ : ಪ್ರತಿ ತಾಲೂಕಿಗೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಅಕ್ರಮ ಸಾಗುವಳಿ ಜಮೀನುಗಳನ್ನು ಸಕ್ರಮಿಕರಣಗೊಳಿಸಲು ಸರಕಾರ ಸಮಿತಿ ರಚನೆ ಮಾಡಲಾಗಿದ್ದು, ಕೂಡಲೇ ಸಮಿತಿ ಸಭೆಯನ್ನು ಕರೆದು ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಸಕ್ರಮಗೊಳಿಸಿ ವಿಲೇವಾರಿ ಮಾಡಬೇಕೆಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಅವರು ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕೋರಿದ್ದಾರೆ. ತಾಲೂಕಿನಲ್ಲಿ ಕಳೆದ 9 ವರ್ಷಗಳಿಂದ ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಪಡಿಸದೇ ಇರುವ ಕಾರಣ ಅರ್ಜಿಗಳು ಹಾಗೆಯೇ ಉಳಿದುಕೊಂಡಿವೆ. ಇಷ್ಟು ವರ್ಷ ಸಮಿತಿಯು ಅಸ್ಥಿತ್ವದಲ್ಲಿ ಇರಲಿಲ್ಲ. ಈಗ ಸರಕಾರ ಅಧೀಕೃತ ಅಧಿಸೂಚನೆ ಹೊರಡಿಸಿ ಚಿಂಚೋಳಿಯ ಬಗರ್ ಹುಕ್ಕುಂ ಸಾಗುವಳಿ ಸಕ್ರಮಿಕ ಸಮಿತಿಯನ್ನು ರಚನೆ ಮಾಡಿ ಎರಡು ತಿಂಗಳುಗಳಾಗಿದೆ. ಕೂಡಲೇ ಸಮಿತಿ ಸಭೆಯನ್ನು ಕರೆದು ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಸಕ್ರಮಗೊಳಿಸಿ ಅರ್ಜಿಗಳು ವಿಲೇವಾರಿ ಮಾಡಲು ಕ್ರಮಕೈಗೊಳಬೇಕೆಂದು ಬೇಕೆಂದು ಮೋತಕಪಳ್ಳಿ ಅವರು ಶಾಸಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಪುರಸಭೆ ಮಾಜಿ ಉಪಾಧ್ಯಕ್ಷ ಸೈಯದ್ ಶಬೀರ್,, ಸುಭಾಷಚಂದ್ರ ಪಾಟೀಲ್ ಯಂಪಳ್ಳಿ, ಖಲಿಲ್ ಪಟೇಲ್ ಅವರು ಉಪಸ್ಥಿತರಿದ್ದರು.
