ಜಕ್ಕಲಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ
ಜಕ್ಕಲಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ
ಗದಗ ಜಿಲ್ಲೆ ರೋಣ ತಾಲೂಕು ಜಕ್ಕಲಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘ (ರಿ), ಜಕ್ಕಲಿ ಹಾಗೂ ಜಕ್ಕಳಿ ಗ್ರಾಮ ಪಂಚಾಯತ ಗ್ರಾಮದ ಸಕಲ ಸಂಘ-ಸಂಸ್ಥೆಗಳು ಮತ್ತು ಗುರು-ಹಿರಿಯರ ಸಹಯೋಗದೊಂದಿಗೆ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 13-08-2026 ರಂದು ಬಸವೇಶ್ವರ ರಕ್ತಾ ಭಂಡಾರ, ಗದಗ' ಇವರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಜರುಗಲಿದೆ.ದಿನಾಂಕ 14-08-2026 ರಂದು ಸಂಜೆ 5:00 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯರಾತ್ರಿ 12:00 ಗಂಟೆಗೆ ಸಮಾಜ ಸೇವಕಿ ಶ್ರೀಮತಿ ಹುಚ್ಚಮ್ಮ ಚೌದ್ರಿ (ಸಾ|| ಕುಣಿಕೇರಿ) ಅವರಿಂದ ಧ್ವಜಾರೋಹಣ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಅಮೋಘ ಭಾರತ ಹಾಗೂ ಶ್ರೀ ಪ್ರಥಿಕ್ ಕುಂದಗೋಳ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ.
ಮಲ್ಲಪ್ಪ ಕ. ಮುಗಳಿ (ಮಾಜಿ ಸೈನಿಕರು)ಬಸವರಾಜ ವೀ. ಕೋರಿ (ಮಾಜಿ ಸೈನಿಕರು)ಮಹಾಂತೇಶಯ್ಯ ಹಿರೇಮಠ (ಬಾರ್ಡರ್ ಸೆಕ್ಯೂರಿಟಿ ಫೋರ್ಸ್)ಕು|| ಪ್ರೀತಿ ಸು. ಬುಳ್ಳಾ (ಭಾವಸಾರ ಅಂತರರಾಷ್ಟ್ರೀಯ ತಂಡದ ಕ್ರೀಡಾಪಟು)ಕು|| ಸೃಷ್ಟಿ ಉ. ಮಜಿ (14ನೇ ಅಖಿಲ ಭಾರತ ಬಾಲಕಿ ಸಿಆರ್‌ಪಿಎಫ್ ಕಮಾಂಡೋ ತರಬೇತಿಯಲ್ಲಿ ಎರಡನೇ ಅತ್ಯುತ್ತಮ ಕೆಡೆಟ್ ಪ್ರಶಸ್ತಿ ವಿಜೇತೆ)
ಇವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗುವುದು.
ಈ ಎಲ್ಲಾ ದೇಶಭಕ್ತಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಜಕ್ಕಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘ (ರಿ) ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

