ಜಿಡಿಎ ಅಧ್ಯಕ್ಷ ಮಜರ್ ಅಲಂಖಾನ್ ಜನ್ಮದಿನ : ಜಿಮ್ಸ್ ಆಸ್ಪತ್ರೆಯ ಬಡ ರೋಗಿಗಳಿಗೆ ಯುವ ಕಾಂಗ್ರೆಸ್‌ನಿಂದ ಹಣ್ಣುಹಂಪಲ ವಿತರಣೆ
ಜಿಡಿಎ ಅಧ್ಯಕ್ಷ ಮಜರ್ ಅಲಂಖಾನ್ ಜನ್ಮದಿನ : ಜಿಮ್ಸ್ ಆಸ್ಪತ್ರೆಯ ಬಡ ರೋಗಿಗಳಿಗೆ ಯುವ ಕಾಂಗ್ರೆಸ್‌ನಿಂದ ಹಣ್ಣುಹಂಪಲ ವಿತರಣೆ
ಕಲಬುರಗಿ: ಜಿಡಿಎ ಅಧ್ಯಕ್ಷ ಮಜರ್ ಅಲಂಖಾನ್ ಅವರ ಜನ್ಮದಿನದ ಅಂಗವಾಗಿ ಯುವ ಕಾಂಗ್ರೆಸ್ ವತಿಯಿಂದ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಬಡ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣುಹಂಪಲ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಸರಡಗಿ ಮಾತನಾಡಿ, ಜನ್ಮದಿನದಂತಹ ವೈಯಕ್ತಿಕ ಸಂಭ್ರಮವನ್ನು ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುವುದು ಸಂತಸದ ಸಂಗತಿಯಾಗಿದೆ. ಬಡವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳೊಂದಿಗೆ ಸಂತೋಷ ಹಂಚಿಕೊಳ್ಳುವ ಉದ್ದೇಶದಿಂದ ಹಣ್ಣುಹಂಪಲ ವಿತರಿಸಲಾಗಿದೆ ಎಂದು ಹೇಳಿದರು.
ರೋಗಿಗಳ ಆರೋಗ್ಯ ಹಾಗೂ ಶೀಘ್ರ ಗುಣಮುಖತೆಗಾಗಿ ಹಾರೈಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ ರೋಗಿಗಳಿಗೆ ಹಣ್ಣುಹಂಪಲ ವಿತರಿಸಿದರು.
ಈ ಸಂದರ್ಭದಲ್ಲಿ ಈರಣ್ಣ ಪಾಟೀಲ್ ಝಳಕಿ, ಪರಶುರಾಮ್ ನಾಟಿಕರ್, ಫಾರೂಕ್ ಪಟೇಲ್, ಉಮರ್ ಜುನೈದಿ, ಸಂಘಪಾಲ್ ಕಾಂಬಳೆ, ಮೊಹಮ್ಮದ್ ಅಸ್ವಾನ್, ಮಿಸ್ಟ್ರಿ ಸರ್ಫುದ್ದೀನ್, ಎಸ್.ಕೆ. ಶೊಯೆಬ್, ನಿಖಿಲ್ ನಾಗತಿಲಕ್, ರಿಯಾಜ್ ಪಟೇಲ್, ಖುರ್ರಂ ಕಲ್ಯಾಣಿ, ಆಸೀಂ ಪಟೇಲ್, ಪ್ರೇಮಕುಮಾರ್, ಅನಾಸ್ ಪಟೇಲ್ ಹಾಗೂ ಯೂನಸ್ ಪಟೇಲ್ ಸೇರಿದಂತೆ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

