ಬೋಗಸ್ ದಾಖಲಾತಿ ಪಡೆದು ಭೂ ಒಡೆತನ ಯೋಜನೆ ಸೌಲಭ್ಯ: ತನಿಖೆಗೆ ಜೈ ಕನ್ನಡಿಗರ ಸೇನೆ ಆಗ್ರಹ

ಬೋಗಸ್ ದಾಖಲಾತಿ ಪಡೆದು ಭೂ ಒಡೆತನ ಯೋಜನೆ ಸೌಲಭ್ಯ: ತನಿಖೆಗೆ ಜೈ ಕನ್ನಡಿಗರ ಸೇನೆ ಆಗ್ರಹ

ಬೋಗಸ್ ದಾಖಲಾತಿ ಪಡೆದು ಭೂ ಒಡೆತನ ಯೋಜನೆ ಸೌಲಭ್ಯ: ತನಿಖೆಗೆ ಜೈ ಕನ್ನಡಿಗರ ಸೇನೆ ಆಗ್ರಹ

ಕಲಬುರಗಿ: ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಮಖಂಡಿ ಗ್ರಾಮದಲ್ಲಿ ಬೋಗಸ್ ದಾಖಲಾತಿ ಪಡೆದು ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರು ಮಾಡಿರುವ ಪ್ರಕರಣದ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜೈ ಕನ್ನಡಿಗರ ಸೇನೆ ಜಿಲ್ಲಾ ಸಮಿತಿ ನೂತನ ಜಿಲ್ಲಾಧಿಕಾರಿಗಳಿಗೆ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು.

ಸೈನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಕೆಲವರು ಸಫಾಯಿ ಕರ್ಮಚಾರಿಗಳೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿ ಭೂ ಒಡೆತನ ಯೋಜನೆಯ ಸೌಲಭ್ಯ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಈ ಹಿಂದೆಯೇ ಕೆಲವು ಸಂಘಟನೆಗಳು ನಿಗಮಕ್ಕೆ ದೂರು ನೀಡಿದ್ದರೂ ಜಿಲ್ಲಾ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಒಂದೇ ಗ್ರಾಮದಲ್ಲಿ ಆರು ಮಂದಿಗೆ ಭೂ ಒಡೆತನ ಯೋಜನೆಯಡಿ ಜಮೀನು ನೋಂದಣಿ ಮಾಡಿರುವುದು ಸರ್ಕಾರಕ್ಕೆ ವಂಚನೆ ಮಾಡುವಂತಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಹೀಗಾಗಿ, ಬೋಗಸ್ ಫಲಾನುಭವಿಗಳ ನೋಂದಣಿ ರದ್ದುಪಡಿಸಿ ನಿಜವಾದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ತಪ್ಪು ದಾಖಲೆ ನೀಡಿದ ಅಧಿಕಾರಿಗಳು, ಬೀಳವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬೋಗಸ್ ದಾಖಲೆ ಪಡೆದುಕೊಂಡವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೈ ಕನ್ನಡಿಗರ ಸೇನೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಪರಮೇಶ್ವರ ಕೂಡಿ ,ಮರೆಪ್ಪ, ಬಾಬು , ಸಾಗರ ಉಪಸ್ಥಿತರಿದ್ದರು.