ಕನಕದಾಸರು ಸಮಾನತೆಯ ಹರಿಕಾರರು : ಕೆ. ಜಿ.ಪೂಜಾರಿ
ಕನಕದಾಸರು ಸಮಾನತೆಯ ಹರಿಕಾರರು : ಕೆ. ಜಿ.ಪೂಜಾರಿ
ಅಫಜಲಪುರ : ಸಮಾಜದಲ್ಲಿರುವ ಜಾತಿ,ಮತ, ಹಾಗೂ ವರ್ಗ ತಾರತಮ್ಯವನ್ನು ತೀವ್ರವಾಗಿ ವಿರೋಧಿಸಿ, ಯಾವುದೇ ಭೇದಭಾವ ಇಲ್ಲದೆ ನಾವೆಲ್ಲರೂ ಒಂದೇ ಎಂಬ ಸಮ ಸಮಾಜ ಕನಸಿನ ಪರಿಕಲ್ಪನೆ ನೀಡಿದವರು ಭಕ್ತ ಶ್ರೇಷ್ಠ ಕನಕದಾಸರು ಎಂದು ಹಿರಿಯ ನ್ಯಾಯವಾದಿಗಳು ಹಾಗೂ ಸಮಾಜಸೇವಕರಾದ ಕೆ.ಜಿ.ಪೂಜಾರಿ ಹೇಳಿದರು.
ನಗರದ ಶ್ರೀ ಸಿದ್ದರಾಮ ಪದಕಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕನ್ನಡದ ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರು ಉಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ದೇವರಿಗೆ ಪ್ರೀತಿಯೇ ಮುಖ್ಯ ಹೊರೆತು ಬಾಹ್ಯ ಆಚರಣೆಯ ಅಲ್ಲ ಎಂದು ಡಾಂಭಿಕತೆ,ಮೂಢನಂಬಿಕೆ,ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು ಎಂದು ನುಡಿದರು.
ಮುಖ್ಯ ಅತಿಥಿಗಳು ಹಾಗೂ ಸಮಾಜ ಸೇವಕರಾದ ಶಂಕರ ಮ್ಯಾಕೇರಿ ಮಾತನಾಡಿ ಸಾಮಾಜಿಕ ಕ್ರಾಂತಿ ಮಾಡುವುದರ ಜೊತೆಗೆ ಜಾತ್ಯಾತೀತ ಮನೋಭಾವವನ್ನು ಸರ್ವರಲ್ಲಿ ಮೂಡಿಸಿ ಸತ್ಯ,ನಿಷ್ಠೆ, ಕಾಯಕ,ಶ್ರದ್ದೆ,ಭಕ್ತಿ ಭಾವದ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಕನ್ನಡದ ಸಂತ ಕವಿ ತತ್ವಜ್ಞಾನಿ ಭಕ್ತ ಕನಕದಾಸರು ಎಂದು ಹೇಳಿದರು.
ಪತ್ರಕರ್ತರಾದ ಯಲ್ಲಾಲಿಂಗ ಪೂಜಾರಿ ಉಪನ್ಯಾಸ ನೀಡುತ್ತಾ ಕನಕದಾಸರ ಹಲವಾರು ತತ್ವಗಳಲ್ಲಿ ಸಮಾಜದಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಿ ಭಕ್ತಿ ಪಂಥದ ಮೂಲಕವೇ ಎಲ್ಲಾ ವರ್ಗದವರು,ಮುಕ್ತಿ ಪಡೆಯಲು ಸಾಧ್ಯ,ಅಲ್ಲದೆ ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಮಾನತೆ ದೊರಕಿಸಿಕೊಟ್ಟ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದು ನುಡಿದರು.
ಶ್ರೀ ನಾಗರಾಜ ಪದಕಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶಿವಕುಮಾರ ಎಸ್.ಪದಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ
ಹಿರಿಯ ಸಾಹಿತಿಗಳಾದ ಬಾಬುಮಿಯಾ ಪುಲಾರಿ,ಕುರುಬ ಸಂಘದ ತಾಲೂಕು ಅಧ್ಯಕ್ಷರಾದ ಭೀರಣ್ಣ ಪೂಜಾರಿ,ಪ್ರಮೋದ್ ಬೋವಿವಡ್ಡರ,ಜಮೀಲ್ ಗೌಂಡಿ, ಯುವ ಮುಖಂಡರಾದ ಗುರುದೇವ್ ಪೂಜಾರಿ,ಅರ್ಜುನ್ ಮಾಶಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಹಾಗೂ ಕನಕ ದರ್ಶನ ಕಾರ್ಯಕ್ರಮದ ಕಲ್ಯಾಣ ಕರ್ನಾಟಕ ಸಂಚಾಲಕರಾದ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳಾಡಿದರು,ಕಾಳಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು,ಯಲ್ಲಾಲಿಂಗ ಪ್ಯಾಟಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

