ಸೇಡಂ ಉಡಗಿ ಗ್ರಾಮದ ವ್ಯಕ್ತಿಯ ಕೊಲೆ ಪ್ರಕರಣ: ಮಾದರ ಮಹಾಸಭಾ ಪ್ರತಿಭಟನೆ

ಸೇಡಂ ಉಡಗಿ ಗ್ರಾಮದ ವ್ಯಕ್ತಿಯ ಕೊಲೆ ಪ್ರಕರಣ: ಮಾದರ ಮಹಾಸಭಾ ಪ್ರತಿಭಟನೆ

ಸೇಡಂ ಉಡಗಿ ಗ್ರಾಮದ ವ್ಯಕ್ತಿಯ ಕೊಲೆ ಪ್ರಕರಣ : ಮಾದರ ಮಹಾಸಭಾ ಪ್ರತಿಭಟನೆ 

ಮೃತ ವ್ಯಕ್ತಿಯ ಕುಟುಂಬಕ್ಕೆ 5 ಎಕರೆ ಜಮೀನು, 50 ಲಕ್ಷ ಪರಿಹಾರ ಒದಗಿಸಲು ಸರಕಾರಕ್ಕೆ : ಜಿಲ್ಲಾಧ್ಯಕ್ಷ ಗೋಪಾಲರಾವ್ ಕಟ್ಟಿಮನಿ ಒತ್ತಾಯ 

ಚಿಂಚೋಳಿ : ಸೇಡಂ ತಾಲೂಕಿನ ಉಡಗಿ ಗ್ರಾಮದ ಮಾದಿಗ ಸಮಾಜದ ವ್ಯಕ್ತಿ ಆಗಿದ್ದ ಭಗವಂತ ರಾಜೇಂದ್ರಪ್ಪ ನಡಗೇರಿ ಅವರನ್ನು ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಅವರ ಮುಂದಾಳತ್ವದಲ್ಲಿ ಸಮುದಾಯ ತಾಲೂಕು ಆಡಳಿತ ಸೌಧದ ಎಂದುರುಗಡೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಅವರು ಮಾತನಾಡಿ, ಮೃತ ಭಗವಂತ ಕುಟುಂಬಕ್ಕೆ ಯಜಮಾನನಾಗಿದ್ದ. ಮದುವೆಯಾಗಿ ಕೇವಲ ಒಂದು ವರ್ಷವಾಗಿತ್ತು. ಕುಟುಂಬದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಕೂಡ ಭಗವಂತನ ಮೇಲೆಯೇ ಇತ್ತು. ಇಂತಹ ವ್ಯಕ್ತಿಯನ್ನು ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಮಾಡಿ ಕೊಲೆ ಮಾಡಿರುವುದು ಮಾದಿಗ ಸಮಾಜ ತೀವ್ರ ಖಂಡಿಸುತ್ತದೆ. ಕುಟುಂಬದ ಯಜಮಾನ ಭಗವಂತನ ಕಳೆದುಕೊಂಡು ಕುಟುಂಬ ಕಂಗಲಾಗಿದೆ. ಭಗವಂತನ ದೌರ್ಜನ್ಯದ ಹತ್ಯೆ ಸೇರಿ ಮಾದಿಗ ಸಮಾಜದ ಮೇಲೆ ನಡೆಯುತ್ತಿರುವ ನಾಲ್ಕನೇ ಪ್ರಕರಣವಾಗಿದೆ. ಆದರೆ ಸರಕಾರ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ಸಚಿವರ ಸ್ವಂತ ಗ್ರಾಮ ಉಡಗಿ ಗ್ರಾಮದಲ್ಲಿಯೇ ದೌರ್ಜನ್ಯ ಪ್ರಕರಣ ಜರುಗಿ ದಿನಗಳು ಕಳೆದಿವೆ. ಆದರೆ ಜಿಲ್ಲೆಯ ಸಚಿವರು ಸೌಜನ್ಯಕಾದರು ಕೊಲೆಯಾದ ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನದ ಧೈರ್ಯ ತಿಳಿಸಲು ಭೇಟಿ ನೀಡಿಲ್ಲವೆಂದು ಪ್ರತಿಭಟನೆಕಾರರು ದೂರಿದರು. 

ಕೊಲೆಯಾದ ಮೃತ ವ್ಯಕ್ತಿಯ ಕುಟುಂಬಕ್ಕೆ ಸರಕಾರ ದೌರ್ಜನ್ಯ ಕಾಯ್ದೆಯಡಿ 50 ಲಕ್ಷ ಪರಿಹಾರ ನೀಡಿ, 5 ಎಕರೆ ಜಮೀನು ಒದಗಿಸಬೇಕು. ಮೃತ ಕುಟುಂಬದ ಸದಸ್ಯರೋಬ್ಬರಿಗೆ ಖಾಯಂ ಸರಕಾರಿ ನೌಕರಿ ನೀಡಬೇಕು. ಸರಕಾರ ಕೊಲೆ ಮಾಡಿದ ಆರೋಪಿಗೆ ಸೂಕ್ತ ಶಿಕ್ಷೆಗೆ ಗುರಿಪಡಿಸಿ, ಅವರ ಇಡೀ ಕುಟುಂಬವನ್ನು ಗಡಿಪಾರು ಮಾಡಬೇಕೆನ್ನುವ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿ ಆಗ್ರಹಿಸಿ, ಒತ್ತಾಯಿಸಿದರು ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಪತ್ರಕರ್ತ ಶಾಮರಾವ ಓಂಕಾರ್, ಮಲ್ಲು ಕೊಡಂಬಲ್, ನರಸಪ್ಪ ಕಿವಡ್ನರ್, ಕಾಶಿನಾಥ ಮಾಸ್ಟರ್, ವಿಜಯಕುಮಾರ ಶಾಬಾದಿ, ಪ್ರವೀಣ ಓಂಕಾರ್, ಕೆ. ಪ್ರಶಾಂತ್, ಸುರೇಶ ಕಟ್ಟಿಮನಿ, ಸುಧಾಕರ ಅಂತಾವರಂ, ವೀರೇಶ ಇರಗಪಳ್ಳಿ, ರಾಬರ್ಟ, ಸಂತೋಷ ಮೇತ್ರಿ, ಅಶ್ವತ ಕಟ್ಟಿಮನಿ, ರವಿ ಗಡಿಲಿಂಗದಳ್ಳಿ, ಸೂರಪ್ಪ ಹಸರಗುಂಡಗಿ, ತುಳಜಪ್ಪ ಮೋಘ, ಸುರೇಂದ್ರ ಪೋಲಕಪಳ್ಳಿ, ರಾಧಾಕೃಷ್ಣ ಕಟ್ಟಿ, ಅನಿಲ ಪೋಲಕಪಳ್ಳಿ ಸೇರಿದಂತೆ ಮಾದಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.