ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಶಕ್ತಿಯ ಪ್ರತಿರೂಪ: ಪ್ರಭು ಚವ್ಹಾಣ
ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಶಕ್ತಿಯ ಪ್ರತಿರೂಪ: ಪ್ರಭು ಚವ್ಹಾಣ
ಮಹಾಸಾದ್ವಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಅಂಗವಾಗಿ ಔರಾದ(ಬಿ) ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕ ಪ್ರಭು ಬಿ. ಚವ್ಹಾಣ ಅವರು ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹೇಮರೆಡ್ಡಿ ಮಲ್ಲಮ್ಮ ಅವರು ಭಕ್ತಿ, ತ್ಯಾಗ, ಸತ್ಯನಿಷ್ಠೆ ಹಾಗೂ ಸಮಾಜ ಸೇವೆಯ ಪ್ರತೀಕವಾಗಿದ್ದರು. ಸಮಾಜಕ್ಕೆ ಸನ್ಮಾರ್ಗದ ಸಂದೇಶ ಸಾರಿದ ಅವರು ಮಹಿಳಾ ಶಕ್ತಿಯ ಆದರ್ಶ ಪ್ರತಿರೂಪರಾಗಿದ್ದಾರೆ ಎಂದು ಹೇಳಿದರು.
ಹೇಮರೆಡ್ಡಿ ಮಲ್ಲಮ್ಮ ಅವರು ತಮ್ಮ ಜೀವನದ ಮೂಲಕ ಸಮಾನತೆ, ಮಾನವೀಯತೆ ಹಾಗೂ ಕಾಯಕದ ಮಹತ್ವವನ್ನು ಸಾರಿದ್ದು, ಧರ್ಮ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳು ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಅವರ ಸಂದೇಶಗಳು ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಪ್ರದೀಪ ಪವಾರ, ಪ್ರಕಾಶ ಭಂಗಾರೆ, ಮಂಜು ಸ್ವಾಮಿ, ಬಾಲಾಜಿ ವಾಗ್ಮಾರೆ, ಲಕ್ಷ್ಮಣ ಜಾಧವ, ಸಂದೀಪ ಟಿಳೇಕರ್, ಕೇರಬಾ ಪವಾರ, ಸಂತೋಷ ಪೋಕಲವಾರ ಸೇರಿದಂತೆ ಹಲವರು ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಮನ ಸಲ್ಲಿಸಿದರು.
