ಮೇ 2ರಂದು ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ
ಮೇ 2ರಂದು ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ವಿಶ್ವಗುರು ಬಸವಣ್ಣನವರ 893ನೇಯ ಜಯಂತಿಯನ್ನು ಶನಿವಾರ ಮೇ. 2 ರಂದು ಬಸವೇಶ್ವರ ವೃತ್ತದಲ್ಲಿ ಅದ್ದೂರಿಯಾಗಿ ಜರುಗಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸವಾದ ಅಧ್ಯಕ್ಷರಾದ ಭೀಮಾಶಂಕರ ಕುಂಬಾರ್ ಅವರು ತಿಳಿಸಿದ್ದಾರೆ
ಅವರು ಮಾಧ್ಯಮದ ಪ್ರತಿನಿಧಿಗಳಿಗೆ ಜೊತೆ ಮಾತನಾಡಿ, ಅಂದು ಸಂಜೆ 5:00 ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಸಾಂಸ್ಕೃತಿಕ ಭವ್ಯವಾದ ಮೆರವಣಿಗೆ ಪ್ರಾರಂಭವಾಗಿ ಮುಖ್ಯರಸ್ತೆಯ ಮುಖಾಂತರ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಂಡು, ಬಹಿರಂಗ ಸಭೆ ನಡೆಯಲಿದೆ, ಸಭೆಯಲ್ಲಿ ಜಿಲ್ಲೆಯ ಹಾಗೂ ತಾಲ್ಲೂಕಿನ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಆದಕಾರಣ ಶಹಾಬಾದ ತಾಲೂಕಿನ ವೀರಶೈವ ಲಿಂಗಾಯತ ಮಹಾಸಭಾ ಬಾಂಧವರು ಹಾಗೂ ಬಸವಣ್ಣನವರ ಅನುಯಾಯಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸದಾನಂದ ಕುಂಬಾರ ಉಪಸ್ಥಿತರಿದ್ದರು
