ಗುರು-ಶಿಷ್ಯ ಪರಂಪರೆ ನಿರಂತರ ಸಾಗುವ ವಾಹಿನಿ
ಗುರು-ಶಿಷ್ಯ ಪರಂಪರೆ ನಿರಂತರ ಸಾಗುವ ವಾಹಿನಿ
ಮಾನವ ಜನ್ಮದ ಸಾರ್ಥಕತೆಗೆ ಭಾರತ ದೇಶದ ಸಂಸ್ಕೃತಿಯಲ್ಲಿ ಗುರುವಿನ ಪಾತ್ರ ಮಹತ್ವದಾಗಿದೆ.ಗುರು-ಶಿಷ್ಯ ಪರಂಪರೆಯು ನಿರಂತರವಾಗಿ ಸಾಗುವ ವಾಹಿನಿ ಆಗಿರಬೇಕೆಂದು ಮದಗುಣಕಿಯ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಪರಮ ಪೂಜ್ಯರಾದ ಶ್ರೀ.ಮ ನಿ. ಪ್ರ.ಸ್ವ. ಅಭಿನವ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು. ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ನಡೆದ ಗುರುಪೂರ್ಣಿಮೆಯ ನಿಮಿತ್ಯ,ಗುರು ವಂದನಾ ಹಾಗೂ ಮದಗುಣಕಿ ಗ್ರಾಮದ ಸಮಗ್ರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ದರ್ಶನ ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತೀಯ ಇತಿಹಾಸದಲ್ಲಿ ಗ್ರಾಮಗಳಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಮಹಾತ್ಮ ಗಾಂಧಿಯವರ ಗ್ರಾಮದ ಉದ್ಧಾರವೇ ದೇಶದ ಉದ್ಧಾರ ಎಂಬಂತೆ ಮೊದಲು ತನ್ನ ಗ್ರಾಮದ ಇತಿಹಾಸವನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಈಗಿನ ನಾಗರಿಕರಿಗೆ ಇದೆ.ಆಗ ಗ್ರಾಮದ ಶ್ರೀಮಂತಿಕೆ,ಶ್ರೇಷ್ಠತೆ ಹೆಚ್ಚಿಸಲು ಸಾಧ್ಯ ಎಂದರು.ಆ ಉದ್ದೇಶವನ್ನು ಇಟ್ಟುಕೊಂಡು ಲೇಖಕರಾದ ಶ್ರೀ ಅಂಬರಾಯ ಮಡ್ಡೆ ಹಾಗೂ ಶ್ರೀ ಶಿವರಾಜ್ ಸಣಮನಿಯವರು ಬರೆದ ಸಂಶೋಧನಾ ಗ್ರಂಥ "ಮದಗುಣಕಿ ಗ್ರಾಮದ ಸಮಗ್ರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ದರ್ಶನ" ಎಂಬ ಕೃತಿಯು ಗ್ರಾಮದ ದಾಖಲೆಗೆ ಪ್ರಮುಖವಾಗಿದೆ. ಗ್ರಾಮವು ಧಾರ್ಮಿಕ ಮತ್ತು ಆಯುರ್ವೇದ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು, ಇದು ಮುಂದಿನ ಪೀಳಿಗೆಗೆ ಅಧ್ಯಯನ ಪೂರಕ ಗ್ರಂಥವಾಗಲಿ ಎಂದು ಹಾರೈಸಿದರು. ಈ ಪುಸ್ತಕವು ಇಡೀ ಗ್ರಾಮದ ಸಮಗ್ರ ಇತಿಹಾಸವನ್ನು ಒಳಗೊಂಡಿದ್ದು ಎರಡು ನೂರಕ್ಕೂ ಅಧಿಕ ಪುಟಗಳಿಂದ ಕೂಡಿದೆ. ಶ್ರೀ ಮಹೇಶ್ ನಾಗೇಂದ್ರಪ್ಪ ಪಾಟೀಲ್ ಈ ಗ್ರಂಥದ ದಾನಿಗಳಾಗಿದ್ದು ಹಾಗೂ ರಾಜಕುಮಾರ ಭಜಂತ್ರಿ,ಮಾಣಿಕ್ ಬರುಡೆ ಮೊದಲಾದವರು ವಿವಿಧ ರೀತಿಯಲ್ಲಿ ಸಹಕಾರವನ್ನು ನೀಡಿದ್ದಾರೆ. ವೇದಿಕೆಯ ಮೇಲೆ ಲೇಖಕರಾದ ಶ್ರೀ ಅಂಬಾರಾಯ ಮಡ್ಡೆ,ಶಿವರಾಜ ಸಣಮನಿ,ನೂರಂದಯ್ಯ ಶಾಸ್ತ್ರಿಗಳು, ರಾಜಕುಮಾರ್ ಸಣಮನಿ,ಮಹಾಂತೇಶ ಸಣಮನಿ,ಬಸಯ್ಯಸ್ವಾಮಿ ಕುಮಾರಸ್ವಾಮಿ ಭೀಮಸೇನ ಆಳಂದ,ಸೂರ್ಯಕಾಂತ್ ಸಣಮನಿ ಮುಂತಾದವರು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಗುರುವಿನ ಆಶೀರ್ವಾದವನ್ನು ಪಡೆದುಕೊಂಡು ಮಹಾಪ್ರಸಾದವನ್ನು ಸ್ವೀಕರಿಸಿದರು ಅಪ್ಪಸಾಬ್ ಪಾಟೀಲ್ ಪ್ರಾರ್ಥಿಸಿದರು,ಅಶೋಕ್ ಬನಸೋದೆ ಸ್ವಾಗತಿಸಿದರು, ಶ್ರೀ ಮಾಂತೇಶ ಸನಮನಿ ಕಾರ್ಯಕ್ರಮವನ್ನು ನಿರೂಪಿಸಿದರು.

