ಸಪ್ತ ನೇಕಾರ ಸೇವಾ ಸಂಘದಲ್ಲಿ ಶ್ರೀ ಏಕೋರಾಮರಾಧ್ಯ ಹಾಗೂ ಬಸವ ಜಯಂತಿ ಆಚರಣೆ.

ಸಪ್ತ ನೇಕಾರ ಸೇವಾ ಸಂಘದಲ್ಲಿ ಶ್ರೀ ಏಕೋರಾಮರಾಧ್ಯ ಹಾಗೂ ಬಸವ ಜಯಂತಿ ಆಚರಣೆ.

ಸಪ್ತ ನೇಕಾರ ಸೇವಾ ಸಂಘದಲ್ಲಿ ಶ್ರೀ ಏಕೋರಾಮರಾಧ್ಯ ಹಾಗೂ ಬಸವ ಜಯಂತಿ ಆಚರಣೆ.

ಕಲಬುರಗಿ: ನಗರದ ಸಪ್ತ ನೇಕಾರ ಸೇವಾ ಸಂಘದ ಕಚೇರಿಯಲ್ಲಿ ಕೇದಾರ ಪೀಠದ ನೇಕಾರ ಕುಲಗುರು ಶ್ರೀ ಏಕೋರಾಮರಾಧ್ಯರ ಜಯಂತಿ ಹಾಗೂ 893ನೇ ಬಸವ ಜಯಂತಿಯನ್ನು ಏಕಕಾಲದಲ್ಲಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಮಹಾ ದಾರ್ಶನಿಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ಬೆರಳಚ್ಚುಗಾರ ರಾಜಶೇಖರ ಮುಗಳಿ ಅವರು ಏಕೋರಾಮರಾಧ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಪಂಚ ಪೀಠಗಳಲ್ಲಿಯೇ ಅತಿ ಮುಖ್ಯವಾದ ಕೇದಾರ ಪೀಠದ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಸಂಪ್ರದಾಯದ ಪ್ರಕಾರ ಇಷ್ಟಲಿಂಗ ಪೂಜೆ ಹಾಗೂ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಏಕೋರಾಮರಾಧ್ಯರ ತತ್ವಗಳು ನಮಗೆ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.

 ಸಮಾಜ ಸೇವಕ ಬಸವತಾರಾಯ ಕೊಳಕೂರ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, 11ನೇ ಶತಮಾನದಲ್ಲಿ ಜೇಡರ ದಾಸಿಮಯ್ಯನವರ ವಚನ ಸಾಹಿತ್ಯದ ಪ್ರಚಲಿತದಲ್ಲಿತ್ತು,

12ನೇ ಶತಮಾನದಲ್ಲಿ ಬಸವಣ್ಣನವರು, ಅನುಭವ ಮಂಟಪವನ್ನು ಸ್ಥಾಪಿಸಿದರು. ಪ್ರಜಾಪ್ರಭುತ್ವದ ಅಡಿಯಲ್ಲಿ ಏಕತೆ ತರಲು ಹೊಸ ಏಕೋಪಾಸನೆ ಪದ್ಧತಿ ಜಾರಿಗೆ ತಂದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.

  ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶ್ರೀನಿವಾಸ ಬಲಪುರ ಅವರು ಎಲ್ಲರನ್ನೂ ಸ್ವಾಗತಿಸಿದರು. ಸಂಘದ ಸದಸ್ಯರು, ಸಂಚಾಲಕರಾದ ನ್ಯಾಯವಾದಿ ಜೆನವೇರಿ ವಿನೋದಕುಮಾರ ಅವರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಪ್ತ ನೇಕಾರ ಬಳಗದ ಕ್ರಿಯಾಶೀಲ ಸದಸ್ಯರು ಹಾಗೂ ವಿವಿಧ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.