ಬಸವಣ್ಣನವರ ತತ್ವಗಳು ಮಾನವ ಏಳಿಗೆಯ ಸೂತ್ರಗಳು-ಶಶೀಲ್ ಜಿ ನಮೋಶಿ
ಬಸವಣ್ಣನವರ ತತ್ವಗಳು ಮಾನವ ಏಳಿಗೆಯ ಸೂತ್ರಗಳು-ಶಶೀಲ್ ಜಿ ನಮೋಶಿ
ಕಲಬುರ್ಗಿ:ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಕಾಯಕ ಯೋಗಿ ಬಸವಣ್ಣ ಅವರಂತಹ ಮಹನೀಯರ ತತ್ವಾದರ್ಶಗಳಿಂದ ಸಮಾಜದ ಏಳಿಗೆ ಸಾಧ್ಯ. ಎಲ್ಲ ಜಾತಿ, ಧರ್ಮವನ್ನು 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಒಂದುಗೂಡಿಸಿ ವೈಚಾರಿಕ ಕ್ರಾಂತಿ ಮೂಲಕ ಮನುಕುಲಕ್ಕೆ ಸಮಾನತೆ ಸಂದೇಶ ಸಾರಿದ ಮಹಾಪುರಷ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.
ಅವರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದ 893 ನೇಯ ಬಸವ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾಯಕವೇ ಕೈಲಾಸ ಎಂದು ಹೇಳಿದ ಅಣ್ಣ ಬಸವಣ್ಣನವರು
ಪ್ರತಿಯೊಬ್ಬರೂ ಕಡ್ಡಾಯವಾಗಿ ದುಡಿಯಬೇಕು, ದುಡಿಮೆಯೇ ದೇವರಿಗೆ ಸಮಾನ. ಯಾವುದೇ ಕೆಲಸವೂ ಸಣ್ಣದಲ್ಲ ಅಥವಾ ದೊಡ್ಡದಲ್ಲ ಎಂಬುದಾಗಿ ಪ್ರತಿಪಾದಿಸಿದರು ನಾವು ನೀವು ಸಹ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೆಬೇಕು ಎಂದು ಹೇಳಿದರು.
ಭಾರತ ದೇಶ ಅತ್ತ್ಯುತ್ತಮವಾಗಿ ಮುನ್ನಡೆಯಬೇಕಾದರೆ ನಮ್ಮ ಸಮಾಜ ಹಾಗೂ ದೇಶದಲ್ಲಿನ ಮಹಿಳೆಯರಿಗೆ ಸಮಾನವಾದ ಅವಕಾಶ ಮಾಡಿಕೊಡಬೇಕಾಗಿದೆ. ಆವಾಗ ಮಾತ್ರ ನಮ್ಮ ದೇಶ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನತೆ ನೀಡುವ ಕೆಲಸ ಮಾಡಿದ್ದರು. ಅವರು ಎಂಟನೇ ವರ್ಷದಲ್ಲಿದ್ದಾಗ ಕುಟುಂಬದಲ್ಲಿ ತಮ್ಮ ಸಹೋದರಿಗೆ ಸಮಾನತೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಅವರು ಕೂಡಲ ಸಂಗಮಕ್ಕೆ ಹೋಗುವ ಹಾಗಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಅವರು ಮಹಿಳೆಯರ ಸಮಾನತೆಗಾಗಿ ಹೋರಾಡಿದ ದೊಡ್ಡ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಬಸವಣ್ಣನವರ ತತ್ವಗಳನ್ನು ನಾವೆಲ್ಲರೂ ಪಾಲಿಸಿದಾಗ ಸಂಸ್ಥೆಯು ಸದೃಢವಾಗಿ ಬೆಳೆಯುತ್ತದೆ ಎಂದು ಹೇಳಿದರು
ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಮಾತನಾಡಿ
ಬಸವಣ್ಣನವರ ದಾಸೋಹ ಪದ್ಧತಿ ಕಲ್ಪನೆಯಂತೆ ಕಷ್ಟಪಟ್ಟು ಗಳಿಸಿದ ಹಣದಲ್ಲಿ ತಮಗೆ ಬೇಕಾದಷ್ಟನ್ನು ಮಾತ್ರ ಇಟ್ಟುಕೊಂಡು, ಉಳಿದದ್ದನ್ನು ಸಮಾಜದ ಏಳಿಗೆಗಾಗಿ (ದಾಸೋಹ) ವಿನಿಯೋಗಿಸಬೇಕು ಎಂದು ಹೇಳಿದ್ದನ್ನು ಪ್ರಸ್ತುತ ಆಡಳಿತ ಮಂಡಳಿ ಪಾಲಿಸಲು ಮುಂದಾಗಿ ಈಗಾಗಲೇ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಪೌಷ್ಠಿಕವಾದ ಉಚಿತ ಆಹಾರ ಪದ್ಧತಿ ಪ್ರಾರಂಭಿಸಿದ್ದು ಇದಕ್ಕೆ *ಬಸವ ಪ್ರಸಾದ* ಎಂದು ಹೆಸರಿಡಲಾಗಿದೆ ಇಂತಹ ಯೋಜನೆಗಳಿಗೆ ಈಗಿನ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು
ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳ್ಳಿ, ಜಂಟಿ ಕಾರ್ಯದರ್ಶಿಗಳಾದ ಬಾ ಕೈಲಾಸ ಪಾಟೀಲ್, ಆಡಳಿತ ಮಂಡಳಿಯ ಸದಸ್ಯರು ಆಸ್ಪತ್ರೇಯ ಸಂಚಾಲಕರಾದ ಡಾ ಕಿರಣ ದೇಶಮುಖ್, ವೈದ್ಯಕೀಯ ಕಾಲೇಜಿನ ಸಂಚಾಲಕರಾದ ಡಾ ಶರಣಬಸಪ್ಪ ಹರವಾಳ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು, ಡೀನ್ ಡಾ ಶರಣಗೌಡ ಪಾಟೀಲ, ವೈಸ್ ಡೀನ್ ಡಾ ವಿ ಎಸ್ ಕಪ್ಪಿಕೇರಿ ವೈದ್ಯಾಧಿಕಾರಿಗಳಾದ ಡಾ ಮಲ್ಲಿಕಾರ್ಜುನ ತೇಗನೂರ, ಡಾ ಪೂಜಾರಿ, ಡಾ ಮಲ್ಲಿಕಾರ್ಜುನ ಭಂಡಾರ ಎಲ್ಲ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು
