ಮಾನಸಿಕ ಆರೋಗ್ಯಕ್ಕೆ ಪೋಷಕಾಂಶಗಳ ಆಹಾರ ಸೇವನೆ ಮುಖ್ಯ : ಡಾ.ಬಸವಕುಮಾರ ಆನಂದಿ
ಮಾನಸಿಕ ಆರೋಗ್ಯಕ್ಕೆ ಪೋಷಕಾಂಶಗಳ ಆಹಾರ ಸೇವನೆ ಮುಖ್ಯ : ಡಾ.ಬಸವಕುಮಾರ ಆನಂದಿ
ಕಲಬುರಗಿ : ಇಂದಿನ ಇಂದಿನ ಬದಲಾಗುತ್ತಿರುವ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಜಂಕ್ ಆಹಾರ ಸೇವನೆ ಮಾಡುತ್ತಿರುವುದು ಕಂಡುಬರುತ್ತಿದ್ದು, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತಿದೆ ನಾವೇ ಹಣ ನೀಡಿ ಅನಾರೋಗ್ಯ ಖರೀದಿಸುತ್ತಿದ್ದೇವೆ, ಉತ್ತಮ ಆರೋಗ್ಯಕ್ಕೆ ಮನೆಯಲ್ಲಿ ತಯಾರಿಸಿದ ಆಹಾರವೇ ಸೇವಿಸಬೇಕು ಇದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಹಾಗೂ ಉತ್ತಮ ಆರೋಗ್ಯಕ್ಕೆ ಯೋಗ ದೈಹಿಕ ಶ್ರಮ ಅಗತ್ಯವಾಗಿದೆ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್) ವೈದ್ಯರಾದ ಡಾ.ಬಸವ ಕುಮಾರ ಆನಂದಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಅವರು ಇಂದು ನಗರದ ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ದಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕದ ನೇತೃತ್ವದಲ್ಲಿ ಏರ್ಪಡಿಸಿದ್ದ ಆರೋಗ್ಯಕ್ಕಾಗಿ ಜೊತೆಯಾಗೋಣ ವಿಜ್ಞಾನದೊಂದಿಗೆ ನಿಲ್ಲೋಣ ಎಂಬ ಘೋಷವಾಕ್ಯದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು .
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ (ಜೀಮ್ಸ್) ಇನೋರ್ವ ವೈದ್ಯರಾದ ಡಾ.ಶಾಲಿನಿಯವರು ಮಾತನಾಡಿ ಬಾಲಕಿಯರಲ್ಲಿ ರಕ್ತದೊತ್ತಡ, ಅನೇಮಿಯಾ ಮತ್ತು ಅಪೌಷ್ಟಿಕತೆಯ ಸಮಸ್ಯೆಗಳು ಇದ್ದು ಸರಿಯಾದ ಆಹಾರ ಕ್ರಮ ಅನುಸರಿಸಿದರೆ ಉತ್ತಮ ಆರೋಗ್ಯ ಹೊಂದಬಹುದು ಹಾಗು ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ವಹಿಸಿದ್ದರು. ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ.ಆಜ್ರಾ ಪರವೀನ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಡಾ. ವಿಜಯಕುಮಾರ್ ಸಾಲಿಮನಿ ಡಾ. ಶ್ರೀಮಂತ್ ಬಿ ಹೋಳಕರ, ಡಾ. ರವಿಂದ್ರ ಕುಮಾರ್ ಭಂಡಾರಿ ಡಾ.ಬಲಭೀಮ ಸಾಂಗ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಂಕುಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಉಪನ್ಯಾಸಕಿಯಾದ ಐಶ್ವರ್ಯ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಅನೀಲಕುಮಾರ ಹಾಲು ಜಗದೇವಪ್ಪ ,ಮಂಜುನಾಥ್ ರೆಡ್ಡಿ ಮೀನಾಕ್ಷಿ ಕೆ ಸಿ ,ಮೀನಾಕ್ಷಿ ಹುಗ್ಗಿ ರೆಹಮಾನ್ ಸಾಬ್, ಎಲ್ಲಪ್ಪ ವಗ್ಗಿ ಬಸಂತ್ ಸಾಗರ್, ಮಾಣಿಕ ಹೋಳಕರ ,ರಿಯಾಜ್, ಮೊಹಮ್ಮದ್ ರಹೇಮಾನಸಾಬ್ ಮಹದ್ಮದ ಪಾಶಾ ಮಲ್ಲಿಕಾರ್ಜುನ ಶೆಟ್ಟಿ ಅವರು ಇದ್ದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
