ಹಿಂದಿ ಫಿಲ್ಮ್ ಕ್ಲಬ್ ವತಿಯಿಂದ ಘಾಸಿರಾಮ್ ಕೊತ್ವಾಲ್ ನಾಟಕ ವೀಕ್ಷಣೆ

ಹಿಂದಿ ಫಿಲ್ಮ್ ಕ್ಲಬ್ ವತಿಯಿಂದ ಘಾಸಿರಾಮ್ ಕೊತ್ವಾಲ್ ನಾಟಕ ವೀಕ್ಷಣೆ

ಹಿಂದಿ ಫಿಲ್ಮ್ ಕ್ಲಬ್ ವತಿಯಿಂದ ಘಾಸಿರಾಮ್ ಕೊತ್ವಾಲ್ ನಾಟಕ ವೀಕ್ಷಣೆ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿ ಇವರ ಹಿಂದಿ ವಿಭಾಗದ ವತಿಯಿಂದ ಇಂದು ಹಿಂದಿ ವಿಭಾಗದ ವಿದ್ಯಾರ್ಥಿನಿಯರ ಪಠ್ಯಕ್ರಮದ ಅರಿವಿಗಾಗಿ ಮರಾಠಿ ಭಾಷೆಯ ಶ್ರೇಷ್ಠ ನಾಟಕಕಾರರಾದ ವಿಜಯ ತೆಂಡೂಲ್ಕರ್ ಅವರ ನಾಟಕ ಘಾಸಿರಾಮ್ ಕೊತ್ವಾಲ್ ತೋರಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸರಕಾರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ ರಾಮಲಿಂಗ ಬೋಸ್ಲೆ ಆಗಮಿಸಿದರು. ಅವರು ಈ ನಾಟಕದ ಕುರಿತು ಮತ್ತು ಈ ನಾಟಕದ ಇಂದಿನ ಪರಿಸ್ಥಿತಿಯಲ್ಲಿ ಅವಶ್ಯಕತೆಯ ಏನು ಎಂಬುವುದನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಇಂತಹ ನಾಟಕ - ಕಥೆ - ಕಾದಂಬರಿಗಳ ಮುಖಾಂತರ ನಾವು ನಮ್ಮ ಸಂಸ್ಕೃತಿ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ವಹಿಸಿಕೊಂಡು ಸಾಹಿತ್ಯದ ಅರಿವು ಎಲ್ಲಾ ವಿದ್ಯಾರ್ಥಿನಿಯರಿಗೆ ಇರಬೇಕು ಎಂದು ತಿಳಿಸಿದರು.

ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಮಾತನಾಡುತ್ತಾ ಘಾಸಿರಾಮ್ ಕೊತ್ವಾಲ್ ನಾಟಕದ ಪಾತ್ರಗಳು ನಮಗೆ ಇಂದಿನ ಪರಿಸ್ಥಿತಿಯಲ್ಲಿ ವಾಸ್ತವಿಕ ಅನಿಸುತ್ತವೆ ಎಂದು ನುಡಿದರು.

ಸುಷ್ಮಾ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಕವಿತಾ ಠಾಕೂರ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದರು.