ಗುಡ್ ಫ್ರೈಡೇ : ಕ್ರೈಸ್ತ ಬಾಂಧವರಿಂದ ಶಾಂತಿ ಪ್ರಚಾರ ಯಾತ್ರೆ :..

ಗುಡ್ ಫ್ರೈಡೇ : ಕ್ರೈಸ್ತ ಬಾಂಧವರಿಂದ ಶಾಂತಿ ಪ್ರಚಾರ ಯಾತ್ರೆ :..

ಗುಡ್ ಫ್ರೈಡೇ : ಕ್ರೈಸ್ತ ಬಾಂಧವರಿಂದ ಶಾಂತಿ ಪ್ರಚಾರ ಯಾತ್ರೆ :..

ನಾಗರಾಜ್ ದಂಡಾವತಿ ವರದಿ

ಶಹಾಬಾದ : - ಕ್ರೈಸ್ತ ಧರ್ಮವು ಪ್ರೀತಿ, ಕ್ಷಮೆ, ಸೇವೆ ಮತ್ತು ಶಾಂತಿಯ ಬೋಧನೆಗಳ ಮೇಲೆ ಆಧಾರಿತವಾಗಿದೆ ಎಂದು ಸಂತ್ ಥಾಮಸ್ ಚರ್ಚ್ ನ ಫಾದರ್ ಜೆರಾಲ್ಡ್ ಸಾಗರ ರವರು ಹೇಳಿದರು. 

ಅವರು ಗುಡ್ ಫ್ರೈಡೇ ಕುರಿತು ಗರಿಗಳ ಭಾನುವಾರ ದ ಅಂಗವಾಗಿ ಕ್ರೈಸ್ತ ಬಾಂಧವರಿಂದ ನಡೆಸಿದ ಶಾಂತಿ ಪ್ರಚಾರ ಯಾತ್ರೆಯಲ್ಲಿ ಮಾತನಾಡಿದರು.

ಯೇಸು ಕ್ರಿಸ್ತನು ದೇವರು ಒಬ್ಬನೇ, ಆತನು ಪ್ರೀತಿಯ ಸ್ವರೂಪಿ ಮತ್ತು ಎಲ್ಲರೂ ಸಹೋದರರಂತೆ ಬದುಕಬೇಕು ಎಂದು ಕಲಿಸಿದನು, ಈ ಯಾತ್ರೆಯು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲದೆ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭ್ರಾತೃತ್ವವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ, ಅನ್ಯಾಯ ಮತ್ತು ಅಧರ್ಮದ ವಿರುದ್ಧ ಪ್ರೀತಿ ಹಾಗೂ ಅಹಿಂಸೆಯಿಂದ ಹೇಗೆ ಜಯ ಸಾಧಿಸಬಹುದು ಎಂಬುದನ್ನು ಸಾರುವ ಸಂಕೇತ ವಾಗಿದೆ ಎಂದು ಹೇಳಿದರು.

ಕಲಬುರಗಿ ಮೆಥೋಡಿಸ್ಟ್ ಚರ್ಚಿನ ಫಾದರ್ ದೀಪಕ ರವರು ಮಾತನಾಡಿ,ಮಾನವ ಕುಲದ ಪಾಪಗಳ ವಿಮೋಚನೆಗಾಗಿ ಯೇಸುವಿನ ತ್ಯಾಗ ಮತ್ತು ಪುನರುತ್ಥಾನದಲ್ಲಿ ನಂಬಿಕೆಯು ಇದರ ಮುಖ್ಯ ಆಶಯವಾಗಿದೆ, ನಿನ್ನ ನೆರೆ ಹೊರೆಯವರನ್ನು ನಿನ್ನಂತೆ ಪ್ರೀತಿಸು, ಬಲಗೆನ್ನೆಗೆ ಹೊಡೆದವನಿಗೆ ಎಡಗೆನ್ನೆ ತೋರು, ತಪ್ಪುಗಳನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಡು ಎಂದು,ಯೇಸುಕ್ರಿಸ್ತನು ಶೋಷಣೆ, ಮೌಢ್ಯ ಮತ್ತು ಕಂದಾಚಾರಗಳ ವಿರುದ್ಧ ಸೆಣಸಿ, ಮಾನವತಾವಾದಿ ಮೌಲ್ಯಗಳನ್ನು ಎತ್ತಿ ಹಿಡಿದರು ಎಂದು ಹೇಳಿದರು.

ಕ್ರೈಸ್ತ ವಿಶ್ವಾಸಿಗಳು ಶಾಂತಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಯೇಸುವಿನ ತ್ಯಾಗವನ್ನು ಸ್ಮರಿಸಿ, 

ಮೆರವಣಿಗೆಯ ನಂತರ ಸಂತ್ ಥಾಮಸ್ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರತಿ ವರ್ಷ ಈಸ್ಟರ್‌ಗೂ ಮುನ್ನ ಶುಕ್ರವಾರವನ್ನು ಗುಡ್‌ಫ್ರೈಡೇ ಆಚರಿಸುವ 40 ದಿನಗಳ ಮೊದಲು ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಮತ್ತು ಉಪವಾಸ ಪ್ರಾರಂಭಿಸುತ್ತಾರೆ.

ಶಾಂತಿ ಪ್ರಚಾರ ಯಾತ್ರೆಯಲ್ಲಿ ಶಾಂತರಾಜ, ಅನೀಲ ಟಿ.ಜೆ, ಇಮ್ಯಾನವೇಲ್, ವಿದ್ಯಾಸಾಗರ, ಜೋಸೆಫ ಮುತ್ತು, ಸ್ಟಾಂಡ್ಲಿ ಹಟನ್, ಆರೋಗ್ಯ ಸ್ವಾಮಿ, ಅಮಲನಾಧನ ಸೇರಿದಂತೆ ಕ್ಯಾಥೋಲಿಕ್ ಮತ್ತು ಮೆಥೋಡಿಸ್ಟ್ ಚರ್ಚಿನ ಭಕ್ತ ವಿಶ್ವಾಸಿಗಳು ಭಾಗವಹಿಸಿದ್ದರು.