ತೋನಸನಹಳ್ಳಿ(ಎಸ) ಗ್ರಾಮದ ಹಿಂದೂ-ಮುಸ್ಲಿಂಮರ ಭಾವೈಕ್ಯತೆಯ ಜಾತ್ರಾ ಮಹೋತ್ಸವದ
ತೋನಸನಹಳ್ಳಿ(ಎಸ) ಗ್ರಾಮದ ಹಿಂದೂ-ಮುಸ್ಲಿಂಮರ ಭಾವೈಕ್ಯತೆಯ ಜಾತ್ರಾ ಮಹೋತ್ಸವದ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಭಾರತೀಯ ಪರಂಪರೆಯಲ್ಲಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಗಳು ಗ್ರಾಮ ಹಾಗೆ ಜನರನ್ನು ಅನ್ಯೋನ್ಯವಾಗಿ ಇರುವಂತೆ ಮಾಡುತ್ತವೆ ಎಂದು ದಸಂಸ ರಾಜ್ಯ ಸಂ ಸಂಚಾಲಕ ಮರಿಯಪ್ಪ ಹಳ್ಳಿ ಯವರು ಹೇಳಿದರು.
ಅವರು ತಾಲ್ಲೂಕಿನ ತೋನಸನಹಳ್ಳಿ(ಎಸ) ಗ್ರಾಮದ ಹಿಂದೂ-ಮುಸ್ಲಿಂಮರ ಭಾವೈಕ್ಯತೆಯ ಕೇಂದ್ರವಾಗಿರುವ ಸದ್ಗುರು ಮಲ್ಲಣಪ್ಪ ಮಹಾರಾಜರು, ಅಲ್ಲಮಪ್ರಭು ಹಾಗೂ ಸುಲ್ತಾನ ಅಹ್ಮದ ಶಾಹವಲಿ ಯವರ ಜಾತ್ರಾ ಮಹೋತ್ಸವದ ಧರ್ಮ ಸಭೆಯಲ್ಲಿ ಮಾತನಾಡಿದರು.
ಅಲ್ಲಮಪ್ರಭುಗಳ ಮತ್ತು ಸುಲ್ತಾನ್ ಅಹ್ಮದ ರವರ ಗಂಧ ಹಾಗೂ ರಥೋತ್ಸವ ಜೊತೆ, ಜೊತೆಯಾಗಿರುವದು ಇದು ಸಾಮಾಜಿಕ ಬದಲಾವಣೆ ತರುವ ಜಾತ್ರೆಯಾಗಿದೆ ಎಂದರು.
ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಮಾತನಾಡಿ, ಡಾ.ಮಲ್ಲಣ್ಣಪ್ಪ ಮಹಾರಾಜರು ಎಲ್ಲ ಜಾತಿ, ಧರ್ಮಗಳನ್ನು ಒಗ್ಗೂಡಿಸಿ ಸೌಹಾರ್ದತೆಯಿಂದ ಜಾತ್ರಾ ಮಹೋತ್ಸವ ಇಡೀ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ,
ತೋನಸನಹಳ್ಳಿ ಗ್ರಾಮ 12ನೇ ಶತಮಾನದ ಬಸವಾದಿ ಶರಣರ ಹಾದಿಯಲ್ಲಿ ಸಾಗುತ್ತಿದೆ, ಎಲ್ಲಾ ಧರ್ಮ ಜಾತಿಗಳನ್ನ ತೆಗೆದುಕೊಂಡು ಹೋಗುವಂತಹ ಪೀಠವಾಗಿದೆ ಎಂದರು.
ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಭೀಮಣ್ಣ ಸಾಲಿ, ಕೋಲಿ-ಕಬ್ಬಲಿಗ ಸಮಾಜದ ಹೋರಾಟಗಾರ ಲಚ್ಚಪ್ಪ ಜಮಾದಾರ ಮಾತನಾಡಿದರು.
ಧರ್ಮ ಸಭೆಯ ವೇದಿಕೆ ಮೇಲೆ ಹಲಕರ್ಟಿ ಯ ಪೂಜ್ಯರಾದ ಅಭಿನವ ಮುನಿಂದ್ರ ಶಿವಾಚಾರ್ಯರು,ಬಸವಕಲ್ಯಾಣದ ರತ್ನಾಕರ ಶಿವಯೋಗಿಗಳು,ಯರಗೋಳದ ಸಂಗಮೇಶ್ವರ ದೇವರು,ಹೋನ್ನಗುಂಟಿಯ ಪದ್ಮಣಪ್ಪ ಅಪ್ಪ,ದಸ್ತಗಿರ ಮುತ್ಯಾ, ರಾಜಗೋಪಾಲ ರೆಡ್ಡಿ,ಡಿವೈಎಸ್ಪಿ ಶಂಕರಗೌಡ ಪಾಟೀಲ,ಪಿ.ಐ ಪರಶುರಾಮ ವನಂಜಕರ, ನಿಂಗಪ್ಪ ಹುಳಗೋಳ,ಸೂರ್ಯಕಾಂತ ಪುಲಾರಿ,ಮಹಾದೇವ ಬಂದಳ್ಳಿ,ಜಯಶ್ರೀ ಕಟ್ಟಿಮನಿ,ಮುತ್ತಮ್ಮ ಮರತೂರ,ನಾಗೇಂದ್ರ ಜೈಗಂಗಾ ಇದ್ದರು.
ನೂಲ ಮಠದ ಪೂಜ್ಯರಾದ ಗುರುಸಿದ್ದೇಶ್ವರ ಶಿವಾಚಾರ್ಯರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಲ್ಲಮ ಪ್ರಭು ಸಂಸ್ಥಾನ ಮಠದ ಪೂಜ್ಯರಾದ ಧರ್ಮರತ್ನ ಡಾ. ಮಲ್ಲಣಪ್ಪ ಮಹಾರಾಜರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವರಾಜ ಮದ್ರಕಿ ಸ್ವಾಗತಿಸಿದರು, ಪ್ರಾರ್ಥನಾ ಗೀತೆ ಮಹೇಶ ನರಿಬೋಳಿ ಹಾಡಿದರು, ನವಲಿಂಗ ಪಾಟೀಲ ನಿರೂಪಿದರು, ಬಸವರಾಜ ಹೇರೂರ ವಂದಿಸಿದರು.
