ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗೆ ಅತ್ಯಗತ್ಯ:ಡಿ.ಟಿ.ಪ್ರಭು
ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗೆ ಅತ್ಯಗತ್ಯ:ಡಿ.ಟಿ.ಪ್ರಭು
ಕಲಬುರಗಿ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗೆ ಇದು ಸುರಕ್ಷಾ ಕವಚ.ಅಪಘಾತವಾದಲ್ಲಿ ತಲೆಗೆ ಬೀಳುವ ಪೆಟ್ಟಿನಿಂದ ತಪ್ಪಿಸಬಹುದು.ಈಗಾಗಲೇ ಕಲಬುರಗಿ ನಗರದಾದ್ಯಂತ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಮೂಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ಕಲಬುರಗಿ ನಗರ ಸಂಚಾರ ಉಪ ವಿಭಾಗ ಪೊಲೀಸ್ ಸಹಾಯಕ ಆಯುಕ್ತ ಡಿ.ಟಿ.ಪ್ರಭು ಅವರು ತಿಳಿಸಿದರು.
ಜಯನಗರ ಶಿವ ಮಂದಿರದಲ್ಲಿ ಭಾನುವಾರ ಸಂಜೆ ಕಲಬುರಗಿ ನಗರ ಸಂಚಾರ ಉಪ ವಿಭಾಗ ಪೊಲೀಸ್ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೆಲ್ಮೆಟ್ ಪ್ರಯೋಜನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಬಿಸಿಲಲ್ಲಿ ಹೆಲ್ಮೆಟ್ ಧರಿಸುವುದರಿಂದ ಮಿದುಳಿಗೆ ಹಾನಿಕಾರಕ ಎಂಬುದು ಸಾರ್ವಜನಿಕರಲ್ಲಿ ತಪ್ಪು ಭಾವನೆ ಇದೆ.ಹೆಲ್ಮೆಟ್ ಅಪಘಾತವಾದಾಗ ತಲೆಗೆ ಪೆಟ್ಟು ಬೀಳದಂತೆ ತಡೆದು ಮಿದುಳಿಗೆ ಯಾವುದೇ ಹಾನಿಯಾಗದೆ ಮರಣದ ಪ್ರಮಾಣ ಶೆ.60 ರಷ್ಟು ರಕ್ಷಿಸುತ್ತದೆ.ಇಂದು ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ.ಅದರಲ್ಲೂ ಯುವ ಜನಾಂಗ ಹೆಲ್ಮೆಟ್ ಧರಿಸದೆ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ಚಲಾಯಿಸಿ ಸಾವನ್ನಪ್ಪಿದ ಘಟನೆಗಳು ಸಾಕಷ್ಟಿವೆ.ಪಾಲಕರು ತಮ್ಮ ಮಕ್ಕಳಿಗೆ ಹೆಲ್ಮೆಟ್ ಧರಿಸುವ ಬಗ್ಗೆ ತಿಳುವಳಿಕೆ ಮೂಡಿಸಬೇಕು.ಹೆಲ್ಮೆಟ್ ಕುರಿತು ನಗರದಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದ ಅವರು ಐಎಸ್ ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಖರೀದಿಸಬೇಕು.ಬಿಸಿಲು ನೆಪ ಇನ್ನು ಮುಂದೆ ನಡೆಯದು ಎಂದು ಅವರು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ನಮ್ಮ ಜೀವ ರಕ್ಷಣೆಗೆ ಸಂಚಾರ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯ ಗೊಳಿಸಿದೆ.ನಾವು ಇದನ್ನು ವಿರೋಧಿಸಬಾರದು.ನಿಯಮಗಳಿರುವುದು ಸಾರ್ವಜನಿಕರ ಸುರಕ್ಷತೆಗಾಗಿ.ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು.ಮುಂಬರುವ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಂಚಾರ ಪಾಲಕರ ಮುಖ್ಯಸ್ಥ ಶರಣಬಸಪ್ಪ ಪಾಟೀಲ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಸಾಮಾಜಿಕ ಕಾರ್ಯಕರ್ತ ಬಾಬಾ ಫಕ್ರುದ್ದೀನ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಟ್ರಸ್ಟ್ ಉಪಾಧ್ಯಕ್ಷ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹಿಳಾ ಕಾರ್ಯದರ್ಶಿ ಅನುರಾಧಾ ಕುಮಾರಸ್ವಾಮಿ ಸ್ವಾಗತಿಸಿದರು.
ಕೋಶಾಧ್ಯಕ್ಷ ಬಸವರಾಜ ಮಾಗಿ,ಸಹ ಕಾರ್ಯದರ್ಶಿ ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ,ಗುರುಪಾದಪ್ಪ ಕಾಂತಾ, ಎಸ್.ಡಿ.ಸೇಡಂಕರ,ವೀರಪ್ಪ ಹುಡುಗಿ, ಮನೋಹರ ಬಡಶೇಷಿ, ಶಿವಕುಮಾರ ಪಾಟೀಲ,ಮಲ್ಲಯ್ಯ ಸ್ವಾಮಿ ಬೀದಿಮನಿ, ಮಧುಸೂದನ ಕುಲಕರ್ಣಿ, ಸೋಮಶೇಖರ,ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಷ್ಮಾ ಮಾಗಿ, ಕಾರ್ಯದರ್ಶಿ ಸುರೇಖಾ ಬಾಲಕೊಂದೆ,ಸಹ ಕಾರ್ಯದರ್ಶಿ ಲತಾ ತುಪ್ಪದ, ಗೀತಾ ಸಿರಗಾಪೂರ, ಮಹಿಳಾ ಸದಸ್ಯರಾದ ಸುಜಾತಾ ಭೀಮಳ್ಳಿ, ವಿಜಯಾ ಚವ್ಹಾಣ್ ಸೇರಿದಂತೆ ಅನೇಕ ಮಹಿಳೆಯರು, ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
