ಬಿಜೆಪಿ ಟೀಕೆಗೆ ರಾಜ್ಯದ ಅಭಿವೃದ್ಧಿಗಳೇ ಉತ್ತರ ನೀಡುತ್ತಿವೆ : ಸಚಿವ ಡಾ. ಶರಣ ಪ್ರಕಾಶ ಪಾಟೀಲ್

ಬಿಜೆಪಿ ಟೀಕೆಗೆ ರಾಜ್ಯದ ಅಭಿವೃದ್ಧಿಗಳೇ ಉತ್ತರ ನೀಡುತ್ತಿವೆ : ಸಚಿವ ಡಾ. ಶರಣ ಪ್ರಕಾಶ ಪಾಟೀಲ್

ಸಚಿವ ಡಾ. ಶರಣಪ್ರಕಾಶ ಪಾಟೀಲರಿಂದ ಅಂದಾಜು 350.೦೦ ಲಕ್ಷ ರು. ಕಾಮಗಾರಿಗೆ ಅಡಿಗಲ್ಲು 

ಬಿಜೆಪಿ ಟೀಕೆಗೆ ರಾಜ್ಯದ ಅಭಿವೃದ್ಧಿಗಳೇ ಉತ್ತರ ನೀಡುತ್ತಿವೆ : ಸಚಿವ ಡಾ. ಶರಣ ಪ್ರಕಾಶ ಪಾಟೀಲ್

ಚಿಂಚೋಳಿ : ಕಾಂಗ್ರೆಸ್ ಸರಕಾರದ ಬಗ್ಗೆ ಟೀಕೆ ಮಾಡುತ್ತಿರುವ ವಿರೋಧ ಪಕ್ಷ ಬಿಜೆಪಿಗೆ ಗ್ಯಾರೆಂಟಿಗಳು ಅನುಷ್ಠಾನದ ಜೊತೆಗೆ ರಾಜ್ಯದ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಸರಕಾರ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಮತ್ತು ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಹೇಳಿದರು.

ಅವರು 2೦25-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಾಲೂಕಿನ ಸೇಡಂ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭೂತಪೂರ ಗ್ರಾಮದ ಅಂದಾಜು 350. ೦0 ಲಕ್ಷ ರೂಪಾಯಿಗಳ ರಾಜ್ಯ ಹೆದ್ದಾರಿ 149 ಸುಧಾರಣೆ ಮತ್ತು ಬಾಕ್ಸ್ ಕಲ್ವರ್ಟ್ (ಬ್ರಿಡ್ಜ್) ನಿರ್ಮಾಣದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು.

ವಿರೋಧ ಪಕ್ಷ ಬಿಜೆಪಿಯವರು ಸರಕಾರ ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಆಗಿದೆ. ರಾಜ್ಯದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಬಿಜೆಪಿ ಪಕ್ಷ ಸರಕಾರವನ್ನು ಟಿಕೀಸುತ್ತಿದೆ. ಆದರೆ ಸರಕಾರ ಗ್ಯಾರಂಟಿ ಯೋಜನೆಗಳು ತಲುಪಿಸುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಈಗಾಗಲೇ ಕ್ಷೇತದ ಭೂತಪೂರ್ ಗ್ರಾಮಕ್ಕೆ ಸಮುದಾಯ ಭವನ, ಹಿರಿಯ ಪ್ರಾಥಮಿಕ ಶಾಲೆ, ಸಿಸಿ ರಸ್ತೆ ನಿರ್ಮಾಣ ಕಾರ್ಯಗಳಿಗೆ 1.6೦ ಕೋಟಿ ರು. ನೀಡಿ ಹಲವು ಅಭಿವೃದ್ಧಿ ಕಾಮಾಗಾರಿಗಳು ನಡೆಸಲಾಗಿದೆದ್ದು, ಇದರ ಜತೆಗೆ ಗ್ರಾಮಸ್ಥರ ಬಹಳ ದೊಡ್ಡ ಬೇಡಿಕೆಯಾಗಿದ್ದ ಬ್ರಿಡ್ಜ್ ಕಾಮಾಗಾರಿಗೆ ಅಂದಾಜು 350.00 ಲಕ್ಷ ರು. ಗಳಲ್ಲಿ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ಗ್ರಾಮದ ಬೇಡಿಕೆ ಈಡೇರಿಸಲಾಗುತ್ತಿದೆ. ಬಡವರಪರ ಕಾಳಜಿ ವಹಿಸಿ ಕೆಲಸ ಮಾಡುವ ಕಾಂಗ್ರೆಸ್ ಪಕ್ಷ ದ ಮುಖ್ಯ ಸಿದ್ಧಾಂತವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಾಲಭವನ ಉಪಾಧ್ಯಕ್ಷ ಅನಿಲಕುಮಾರ ಜಮಾದಾರ್, ಜಗದೇವಯ್ಯ ಸ್ವಾಮಿ, ಗ್ಯಾರೆಂಟಿ ಅಧ್ಯಕ್ಷ ಶಿವಶರಣ ರೆಡ್ಡಿ, ಲೋಕೋಪಯೋಗಿ ಎಇಇ ಬಸವರಾಜ ಮಸಾಜಿ, ಗುತ್ತಿಗೆದಾರ ಚಂದ್ರಕಾಂತ, ಜೆಇ ಅಕ್ಷಯ, ಇಒ ಬಿ. ಎಸ್. ಡಿಗ್ಗಿ, ಗ್ರೇಡ್ - 2 ತಹಸೀಲ್ದಾರ್ ರಾಜೇಶ್ವರಿ, ಬಸವರಾಜ ಪಾಟೀಲ್ ಹುಡುಗಿ, ಶಿವಶರಣರೆಡ್ಡಿ, ಶರಣು ದೇಸಾಯಿ, ಲಿಂಗಶೆಟ್ಟಿ ತಟೆಪಳ್ಳಿ, ಸಂತೋಷ ಗುತ್ತೇದಾರ ಅವರು ಉಪಸ್ಥಿತರಿದ್ದರು.