ನಾಳೆ "ಮುಕ್ಕಣ್ಣ ಕಂಡ ಬಸವಣ್ಣ" ಕೃತಿ ಲೋಕಾರ್ಪಣೆ

ನಾಳೆ "ಮುಕ್ಕಣ್ಣ ಕಂಡ ಬಸವಣ್ಣ" ಕೃತಿ ಲೋಕಾರ್ಪಣೆ

ನಾಳೆ "ಮುಕ್ಕಣ್ಣ ಕಂಡ ಬಸವಣ್ಣ" ಕೃತಿ ಲೋಕಾರ್ಪಣೆ.

ಶಹಪುರ : ಖ್ಯಾತ ಸಾಹಿತಿಗಳು ಹಾಗೂ ಸಾಂಸ್ಕೃತಿಕ ಚಿಂತಕರು ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ರಚಿಸಿದ "ಮುಕ್ಕಣ್ಣ ಕಂಡ ಬಸವಣ್ಣ" ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಕಟಣೆಗೆ ತಿಳಿಸಿದ್ದಾರೆ.

ನಗರದ ಶಿರವಾಳ ರಸ್ತೆಯಲ್ಲಿರುವ ಎಸ್.ಎಂ.ಸಿ.ಜೈನ್ ಬಿ.ಈಡ್ ಕಾಲೇಜಿನಲ್ಲಿ ಮಹಾಶೈವ ಪ್ರಕಾಶನ ಬೆಂಗಳೂರು ಹಾಗೂ ಕಲಾನಿಕೇತನ ಟ್ರಸ್ಟ್ ಸಗರ ಇವುಗಳ ಸಹಯೋಗದಲ್ಲಿ ಮಾರ್ಚ್ 31ರಂದು ಮಂಗಳವಾರ ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯ ಮುಖಂಡರಾದ ಸಿದ್ದಲಿಂಗಣ್ಣ ಆನೆಗುಂದಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ದರಾಮ ಹೊನಕಲ್ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ, ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ ಕೃತಿ ಕುರಿತು ಮಾತನಾಡಲಿದ್ದು,ಹಿರಿಯ ಪತ್ರಕರ್ತ ನಾರಾಯಣಚಾರ್ಯ ಸಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕಾಲೇಜಿನ ಪ್ರಾಂಶುಪಾಲರಾದ ಶಭಾನಾ ಎಸ್. ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗುವುದು ಎಂದು ತಿಳಿಸಿದ್ದಾರೆ.