ಮಲ್ಲಿಕಾರ್ಜುನ ಗುಡಿಯಲ್ಲಿ ಹುಂಡಿ ಎಣಿಕೆ – ಭಕ್ತರಿಂದ ಲಕ್ಷಾಂತರ ಕಾಣಿಕೆ ಸಂಗ್ರಹ

ಮಲ್ಲಿಕಾರ್ಜುನ ಗುಡಿಯಲ್ಲಿ ಹುಂಡಿ ಎಣಿಕೆ – ಭಕ್ತರಿಂದ ಲಕ್ಷಾಂತರ ಕಾಣಿಕೆ ಸಂಗ್ರಹ

ಮಲ್ಲಿಕಾರ್ಜುನ ಗುಡಿಯಲ್ಲಿ ಹುಂಡಿ ಎಣಿಕೆ – ಭಕ್ತರಿಂದ ಲಕ್ಷಾಂತರ ಕಾಣಿಕೆ ಸಂಗ್ರಹ

ಮಾರ್ಚ್ 25: ಸ್ಥಳೀಯ ಮಲ್ಲಿಕಾರ್ಜುನ ಗುಡಿಯಲ್ಲಿ ಭಕ್ತರ ಕಾಣಿಕೆಗಳ ಹುಂಡಿಯನ್ನು ಇಂದು ಸಾಯಂಕಾಲ 6 ಗಂಟೆಗೆ ತೆರೆಯಲಾಗಿದ್ದು, ಸಂಗ್ರಹಿತ ಹಣವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಎಣಿಸಲಾಯಿತು.

ಗುಡಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಖಜಾಂಚಿ ಗುರುಲಿಂಗಯ್ಯ ಮಠಪತಿ ಅವರ ನೇತೃತ್ವದಲ್ಲಿ ನಡೆದ ಈ ಎಣಿಕೆ ಕಾರ್ಯದಲ್ಲಿ ಒಟ್ಟು ರೂ. 92,923 (ತೊಂಬತ್ತೆರಡು ಸಾವಿರ ಒಂಬತ್ತು ನೂರು ಇಪ್ಪತ್ತ್ಮೂರು) ಹಣ ಸಂಗ್ರಹವಾಗಿರುವುದು ತಿಳಿದುಬಂದಿದೆ. ಇದರ ಜೊತೆಗೆ ಭಕ್ತರಿಂದ ಒಂದು ಗಡಿಯಾರ ಹಾಗೂ ಎರಡು ಕಣ್ಣಬಟ್ಟಗಳ ಕಾಣಿಕೆಯೂ ಲಭಿಸಿದೆ.

ಹುಂಡಿಯಲ್ಲಿ ಸಂಗ್ರಹವಾಗಿದ್ದ ನೋಟು ಮತ್ತು ನಾಣ್ಯಗಳ ವಿವರ ಹೀಗಿದೆ:

ರೂ. 500 ಮುಖಬೆಲೆಯ 65 ನೋಟುಗಳು, ರೂ. 200 ಮುಖಬೆಲೆಯ 18 ನೋಟುಗಳು, ರೂ. 100 ಮುಖಬೆಲೆಯ 164 ನೋಟುಗಳು, ರೂ. 50 ಮುಖಬೆಲೆಯ 113 ನೋಟುಗಳು, ರೂ. 20 ಮುಖಬೆಲೆಯ 285 ನೋಟುಗಳು, ರೂ. 10 ಮುಖಬೆಲೆಯ 360 ನೋಟುಗಳು ಹಾಗೂ ರೂ. 10 ಮುಖಬೆಲೆಯ ಬಂದಿಗಳು ಒಟ್ಟು 1120. ಇವುಗಳ ಜೊತೆಗೆ ರೂ. 5 ನಾಣ್ಯಗಳು 1885, ರೂ. 2 ನಾಣ್ಯಗಳು 1468 ಹಾಗೂ ರೂ. 1 ನಾಣ್ಯಗಳು 1000 ಸಂಗ್ರಹವಾಗಿವೆ.

ಈ ಎಣಿಕೆ ಕಾರ್ಯದಲ್ಲಿ ಹಿರಿಯರಾದ ರೇವಣಸಿದ್ದಪ್ಪ ಜೀವಣಗಿ, ಕಾಶಿನಾಥ ಚಿನಮಳ್ಳಿ, ಸುಭಾಷ್ ಮಂಠಾಳ್ಳ, ನಾಗರಾಜ ಹೆಬ್ಬಾಳ, ಶಾಂತಯ್ಯ ಬಿದಿಮನಿ, ಸಂಗನಗೌಡ ಬಿರಾದಾರ, ಶಿವಶರಣಪ್ಪ, ಬಿರಾಜದಾರ, ವಿಜಯಕುಮಾರ ಸೀಗಿ ಮತ್ತು ಶರಣಯ್ಯ ಮಠಪತಿ ಉಪಸ್ಥಿತರಿದ್ದರು.

ಗುಡಿಯ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಭಕ್ತರು ನೀಡಿದ ಕಾಣಿಕೆಗಳು ಬಳಸಲಾಗುತ್ತವೆ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದ್ದಾರೆ.