೭೧ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ. ೨೦೨೬ರಲ್ಲಿ ಕನ್ನಡ ನುಡಿ ಸಮ್ಮೇಳನ ಆಯೋಜನೆ

೭೧ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ. ೨೦೨೬ರಲ್ಲಿ ಕನ್ನಡ ನುಡಿ ಸಮ್ಮೇಳನ ಆಯೋಜನೆ

೭೧ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ. ೨೦೨೬ರಲ್ಲಿ ಕನ್ನಡ ನುಡಿ ಸಮ್ಮೇಳನ ಆಯೋಜನೆ

ಹೊಳೆಆಲೂರು: ನುಡಿಯ ಸೊಬಗು, ನಾಡಿನ ಹಿರಿಮೆ ಹಾಗೂ ಸಾಹಿತ್ಯದ ಕಂಪನ್ನು ಜಗದಗಲ ಪಸರಿಸುವ ಉದ್ದೇಶದಿಂದ ೭೧ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ (ರಿ.) ವತಿಯಿಂದ ಕನ್ನಡ ನುಡಿ ಸಮ್ಮೇಳನ–೨೦೨೬ ಆಯೋಜಿಸಲಾಗಿದೆ.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ನಾಡಿನ ವೈಭವವನ್ನು ಸಾರುವ ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಸಾಹಿತ್ಯ ಬಳಗ ಆತ್ಮೀಯವಾಗಿ ಆಹ್ವಾನಿಸಿದೆ.

ಕನ್ನಡ ನುಡಿಯ ಆರಾಧನೆ, ಸಾಹಿತ್ಯದ ಅಭಿರುಚಿ ಮತ್ತು ಕನ್ನಡ ಸಂಸ್ಕೃತಿಯ ಸಂಭ್ರಮವನ್ನು ಎಲ್ಲೆಡೆ ಪಸರಿಸುವ ಆಶಯದೊಂದಿಗೆ ಈ ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಾಹಿತ್ಯಾಸಕ್ತರು ತಮ್ಮ ಕುಟುಂಬ ಹಾಗೂ ಪರಿವಾರದೊಂದಿಗೆ ಆಗಮಿಸಿ ಸಮ್ಮೇಳನದ ಗೌರವ ಹೆಚ್ಚಿಸಬೇಕೆಂದು ಸಂಸ್ಥೆಯು ಮನವಿ ಮಾಡಿದೆ.

ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ (ರಿ.), ಹೊಳೆಆಲೂರು ವತಿಯಿಂದ ಎಲ್ಲ ಕನ್ನಡಾಭಿಮಾನಿಗಳಿಗೆ ಆತ್ಮೀಯ ಸ್ವಾಗತ ಕೋರಲಾಗಿದೆ.

— ಹುಚ್ಚೀರಪ್ಪ ವೀರಪ್ಪ ಈಟಿ

ಜಿಲ್ಲಾ ವರದಿಗಾರರು, ಕಲ್ಯಾಣ ಕಹಳೆ, ಗದಗ.