ಕೊಂಡೆದ ಓಣಿಯ ರತ್ನ ನಿಲಯದಲ್ಲಿ ಶ್ರೀ ರಾಮ ಜಯಂತಿ ಆಚರಣೆ

ಕೊಂಡೆದ ಓಣಿಯ ರತ್ನ ನಿಲಯದಲ್ಲಿ ಶ್ರೀ ರಾಮ ಜಯಂತಿ ಆಚರಣೆ

ಶ್ರೀ ರಾಮನವಮಿ ಪ್ರಯುಕ್ತ, ಬ್ರಹ್ಮಪುರದ ಕೊಂಡೆದ ಓಣಿಯ ರತ್ನ ನಿಲಯ ದಲ್ಲಿ ಶ್ರೀ ರಾಮ ಜಯಂತಿ ಆಚರಿಸಲಾಯಿತು.

 ಶ್ರೀಮತಿ ಭಾಗ್ಯಶ್ರೀ ಕಲ್ಯಾಣರಾವ ಮಹಾಗಾಂವ ಅವರ ನಿವಾಸದಲ್ಲಿ ರಾಮನ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಕುಮಾರಿ ಅನುರಾಧಾ ಕೆ.ಎಂ. ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಮಹಿಳಾ ಸದಸ್ಯೆ ಶ್ರೀಮತಿ ವೀಣಾ ವಿ. ಜೆನವೇರಿ ಅವರು ಭಾಗವಹಿಸಿ, ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, “ಶ್ರೀರಾಮನು ರಾಜನಾಗಿದ್ದರೂ, ತನ್ನ ಜೀವನದಲ್ಲಿ ನಡೆದ ಎರಡು ಪ್ರಮುಖ ಪ್ರಸಂಗಗಳ ಮೂಲಕ ಮಹಾನ್ ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಒಬ್ಬ ಅಗಸನ ಮಾತನ್ನು ನಿರ್ಲಕ್ಷಿಸಬಹುದಾಗಿದ್ದರೂ, ಧರ್ಮ ಮತ್ತು ನ್ಯಾಯವನ್ನು ಕಾಪಾಡಲು ಕಠಿಣ ನಿರ್ಧಾರ ತೆಗೆದುಕೊಂಡರು. ಧರ್ಮಪತ್ನಿಯಾದ ಸೀತೆಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯಪರ ನಿಲುವು ತಾಳಿದ ಕಾರಣ ಅವರು ಪುರುಷೋತ್ತಮನಾಗಿ ಕಂಗೊಳಿಸಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರಾಮಚರಿತ್ರೆಯೊಂದರ ಪ್ರಸಂಗವನ್ನು ಸ್ಥಳೀಯ ಮಕ್ಕಳಿಂದ ಅಭಿನಯವಾಗಿ ಪ್ರದರ್ಶಿಸಲಾಯಿತು. ರಾಮನ ಪಾತ್ರದಲ್ಲಿ ಕುಮಾರಿ ಕೀರ್ತನಾ (ಚಿನ್ನಿ) ಅದ್ಭುತವಾಗಿ ಮಿಂಚಿದರೆ, ಲಕ್ಷ್ಮಣನ ಪಾತ್ರದಲ್ಲಿ ಕುಮಾರ ಅಭಿಲಾಷ್ ಹೊಸಪೇಟಿ ಅವರು ಮನಮೋಹಕವಾಗಿ ಅಭಿನಯಿಸಿದರು.

ಪಕ್ಕದ ಮನೆಯ ನಿವಾಸಿಗಳು ಕೂಡ ಪೂಜೆಯಲ್ಲಿ ಭಾಗವಹಿಸಿ, ಶ್ರೀರಾಮನ ದರ್ಶನ ಪಡೆದು ಧನ್ಯರಾದರು.

ಕಾರ್ಯಕ್ರಮದಲ್ಲಿ ಶ್ರೇಯ ಬಿರಾದಾರ, ವೈಷ್ಣವಿ ಜೆನವೇರಿ, ಗುರುರಾಜ ಮಹಾಗಾಂವ, ಶರಣಪ್ರಸಾದ ಜೆನವೇರಿ, ಶ್ರೀರಕ್ಷಾ ಬಿರಾದಾರ, ಶರಣು ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.