ಗೃಹರಕ್ಷಕ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮಾಜಿ ಸೈನಿಕ ಸಿ.ಎಂ. ಹರ್ತಿ ಹೇಳಿದರು

ಗೃಹರಕ್ಷಕ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮಾಜಿ ಸೈನಿಕ ಸಿ.ಎಂ. ಹರ್ತಿ ಹೇಳಿದರು

ಸಮಾಜದ ಶಾಂತಿ, ಸುವ್ಯವಸ್ಥೆ ಹಾಗೂ ಸಾಮರಸ್ಯ ಕಾಪಾಡುವಲ್ಲಿ ಗೃಹರಕ್ಷಕ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮಾಜಿ ಸೈನಿಕ ಸಿ.ಎಂ. ಹರ್ತಿ ಹೇಳಿದರು

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕುಟುಂಬದ ಜವಾಬ್ದಾರಿಯೊಂದಿಗೆ ಜೀವನೋಪಾಯಕ್ಕಾಗಿ ನಿತ್ಯ ಕಾಯಕದಲ್ಲಿ ತೊಡಗಿರುವುದು ಸಹಜ. ಆದರೆ ವೈಯಕ್ತಿಕ ಬದುಕಿನ ಜವಾಬ್ದಾರಿಗಳ ನಡುವೆಯೂ ಸಮಾಜದ ಹಿತಕ್ಕಾಗಿ ಸಮಯ ಮೀಸಲಿಟ್ಟು ಸೇವೆ ಸಲ್ಲಿಸುವ ಮನೋಭಾವ ಎಲ್ಲರಲ್ಲೂ ಇರುವುದಿಲ್ಲ. ಪೊಲೀಸ್ ಇಲಾಖೆಯೊಂದಿಗೆ ಕೊಂಡಿಂ-ರಾಗಿ ಕಾರ್ಯನಿರ್ವಹಿಸುತ್ತಾ ಸಮಾಜದ ಶಾಂತಿ, ಸುವ್ಯವಸ್ಥೆ ಹಾಗೂ ಸಾಮರಸ್ಯ ಕಾಪಾಡುವಲ್ಲಿ ಗೃಹರಕ್ಷಕ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮಾಜಿ ಸೈನಿಕ ಸಿ.ಎಂ. ಹರ್ತಿ ಹೇಳಿದರು. ಪಟ್ಟಣದ ಗಾಂಧಿ ಭವನದ ಆವರಣದಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ ಆಯೋಜಿಸಿದ್ದ ಗೃಹರಕ್ಷಕ ಸಿಬ್ಬಂದಿಗೆ ವಿಶೇಷ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗೃಹರಕ್ಷಕ ಸಿಬ್ಬಂದಿ ತಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಜವಾಬ್ದಾರಿಗಳ ನಡುವೆಯೂ ಸಾಮಾಜಿಕ ಸೇವೆಗೆ ಆದ್ಯತೆ ನೀಡುತ್ತಿರುವುದು ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ನಿಜವಾದ ಸೇವಾನಿರತ ವ್ಯಕ್ತಿಗಳನ್ನು ಸಮಾಜ ಗುರುತಿಸಿ ಗೌರವಿಸಬೇಕು. ತಮ್ಮ ವಿಶೇಷ ಆಲೋಚನೆಗಳು ಹಾಗೂ ಸೇವಾ ಮನೋಭಾವದ ಮೂಲಕ ಸಮಾಜಕ್ಕೆ ಮಾದರಿಯಾಗುತ್ತಿರುವ ಗೃಹರಕ್ಷಕರ ಕಾರ್ಯ ಇತರರಿಗೂ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಮಾಜಿ ಸೈನಿಕ ದಿನೇಶ ಕೋಗಿಲೆ ಮಾತನಾಡಿ, ಸೈನಿಕರು ದೇಶದ ಗಡಿಯಲ್ಲಿ ನಿಂತು ರಾಷ್ಟ್ರದ ರಕ್ಷಣೆ ಮಾಡಿದರೆ, ಗೃಹರಕ್ಷಕರು ,ಆಂತರಿಕ ಭದ್ರತೆ, ಸಾಮಾಜಿಕ ಶಾಂತಿ ಹಾಗೂ ಸಾಮರಸ್ಯ ಕಾಪಾಡುವಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ರಕ್ಷಣೆಯ ಕಾರ್ಯ ವಿಭಿನ್ನ ಹಂತಗಳಲ್ಲಿ ನಡೆಯುತ್ತಿದ್ದು, ಗೃಹರಕ್ಷಕರ ಸೇವೆಯೂ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಇಂತಹ ಸೇವಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯನ್ನು ಗೌರವಿಸುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಅಧಿಕಾರಿ ಸುರೇಶ ಹಳ್ಳಿಕೇರಿ ಮಾತನಾಡಿ, ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ವಿಶೇಷ ಸಮವಸ್ತ್ರ ವಿತರಿಸಲು ಮುಂದಾಗಿರುವ ಮಾಜಿ ಸೈನಿಕ ಸಿ.ಎಂ. ಹರ್ತಿ ಅವರ ಉದಾರ ಮನೋಭಾವ ಹಾಗೂ ಅಂತಃಕರಣ ಅಭಿನಂದನಾರ್ಹ. ಇಂತಹ ಸಹಕಾರವು ಸಿಬ್ಬಂದಿಯಲ್ಲಿ ಮತ್ತಷ್ಟು ಸೇವಾ ಉತ್ಸಾಹ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೃಹರಕ್ಷಕ ಸಿಬ್ಬಂದಿಗೆ ವಿಶೇಷ ಸಮವಸ್ತ್ರ ಕೊಡುಗೆ ನೀಡಿದ ಮಾಜಿ ಸೈನಿಕ ಸಿ.ಎಂ. ಹರ್ತಿ ಹಾಗೂ ದಿನೇಶ ಕೋಗಿಲೆ ಅವರನ್ನು ಗೃಹರಕ್ಷಕ ದಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಶಪ್ಪ ಸಂಗನಾಳ, ಜಗದೀಶ ಬಂಡಿವಡ್ಡರ, ಪರಪ್ಪ ಹಡಪದ, ಶಿವಾನಂದ ಕುಂಬಾರ, ಶಿವು ತಳವಾರ, ಶರಣಪ್ಪ ಬೆಲೇರಿ, ಮಹಾಂತೇಶ ಗೋಡಿ, ಮಂಜುನಾಥ ಕಡೆತೋಟದ, ಶಿವಪ್ಪ ಮುಶಿಗೇರಿ, ಮಂಜುನಾಥಸಾಬಳೆ,ಅಂದಪ್ಪಲಕ್ಷೇಶ್ವರ,ಮಲ್ಲಪ್ಪ ಅರಮನಿ,ಬಸವರಾಜ ನೆಲ್ಲೂರ, ವಿರುಪಾಕ್ಷಪ್ಪ ಇಟಗಿ, ವೀರಣ್ಣ ಇಟಗಿ, ಬಸವರಾಜ ಕರಡಿ ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ