ಪಂಚಶೀಲ ಬುದ್ಧ ವಿಹಾರ, ಬೆಳಕೊನಿ (ಭೋ) ನಲ್ಲಿ ಸಮ್ರಾಟ್ ಅಶೋಕ ಜಯಂತಿ ಆಚರಣೆ

ಪಂಚಶೀಲ ಬುದ್ಧ ವಿಹಾರ, ಬೆಳಕೊನಿ (ಭೋ) ನಲ್ಲಿ ಸಮ್ರಾಟ್ ಅಶೋಕ ಜಯಂತಿ ಆಚರಣೆ

ಪಂಚಶೀಲ ಬುದ್ಧ ವಿಹಾರ, ಬೆಳಕೊನಿ (ಭೋ) ನಲ್ಲಿ ಸಮ್ರಾಟ್ ಅಶೋಕ ಜಯಂತಿ ಆಚರಣೆ

ಕಮಲನಗರ :ಬೆಳಕೊನಿ ಗ್ರಾಮದಲ್ಲಿರುವ ಪಂಚಶೀಲ ಬುದ್ಧ ವಿಹಾರದಲ್ಲಿ ಸಮ್ರಾಟ್ ಅಶೋಕ ಜಯಂತಿಯನ್ನು ಭಕ್ತಿಭಾವದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಮಿತಿ ಅಧ್ಯಕ್ಷರಾದ ತಾನಾಜಿ ಕಂಬ್ಳೆ ಅವರು ಗೌತಮ ಬುದ್ಧ, ಸಮ್ರಾಟ್ ಅಶೋಕ) ಮತ್ತು ಡಾ. ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಹಾರಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

 ಸಮ್ರಾಟ್ ಅಶೋಕನು ಕಲಿಂಗ ಯುದ್ಧದ ಭೀಕರತೆಯನ್ನು ಕಂಡು ಮನಸ್ಸಿನಲ್ಲಿ ಉಂಟಾದ ಪರಿವರ್ತನೆ ಕುರಿತು ವಿವರಿಸಿದರು. ಯುದ್ಧದಿಂದ ಶಾಂತಿಯ ಕಡೆಗೆ ನಡೆದ ಅವರ ಪಯಣ ಮಾನವ ಇತಿಹಾಸದಲ್ಲಿ ಅಪರೂಪದ ಉದಾಹರಣೆ ಎಂದು ಕಪಿಲ್ ಡೋಂಗ್ರೆ ಮಾತಾಡಿದರು .

ಭಾರತವನ್ನು ಏಕೀಕರಿಸಿ ಧಮ್ಮದ ಮಾರ್ಗವನ್ನು ವಿಶ್ವದಾದ್ಯಂತ ಹರಡಿದ ಮಹಾನ್ ಚಕ್ರವರ್ತಿ ಅಶೋಕನೆಂದು ಅವರು ಶ್ಲಾಘಿಸಿದರು.

ಅವರು ಉಲ್ಲೇಖಿಸಿದ ಪ್ರಭಾವಶಾಲಿ ವಾಕ್ಯಗಳಾದ

“ಯುದ್ಧವು ನಾಶವನ್ನು ತರುತ್ತದೆ; ಧಮ್ಮವು ಮಾನವತ್ವವನ್ನು ಬೆಳೆಸುತ್ತದೆ.”

“ಶಕ್ತಿಯ ನಿಜವಾದ ಅರ್ಥ ಜಯದಲ್ಲಿ ಅಲ್ಲ, ದಯೆಯಲ್ಲಿ ಇದೆ.”

“ಲೋಕಕ್ಕೆ ಬೇಕಾದುದು ಯುದ್ಧವಲ್ಲ, ಶಾಂತಿ ಮತ್ತು ಸಹಾನುಭೂತಿ.”ಮಾಹಿತಿ ತಿಳಿಸಿದರು.

ಕಾರ್ಯಕ್ರಮದ ವೇಳೆ ಧಮ್ಮ ವಂದನಾ ಮಂತ್ರಗಳ ಪಠಣ ರಾಜು ಡೋಂಗ್ರೆ ನೆರೆವೆರಿಸಿದ್ರು ಮತ್ತು ಭಜನೆ–ಗೀತೆಗಳ ಗಾಯನ ಭಕ್ತಿಗೀತೆಗಳೊಂದಿಗೆ ಕಾರ್ಯಕ್ರಮ ನಡೆಯಿತು. 

ಗ್ರಾಮಸ್ಥರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.

ಈ ಸಮಾರಂಭವು ಸಮ್ರಾಟ್ ಅಶೋಕನು ಭಾರತವನ್ನು ಏಕೀಕರಿಸಿದ ಇತಿಹಾಸ, ಧಮ್ಮದ ಮೂಲಕ ವಿಶ್ವಕ್ಕೆ ಕರುಣೆ ಮತ್ತು ಶಾಂತಿಯ ಸಂದೇಶವನ್ನು ನೀಡಿದ ಮಹತ್ವವನ್ನು ಸ್ಮರಿಸುವ ಜೊತೆಗೆ ಡಾ. ಭೀಮರಾವ್ ಅಂಬೇಡ್ಕರ್ ಅವರ ಸಮಾನತೆ ಮತ್ತು ಮಾನವ ಹಕ್ಕುಗಳ ಸಂದೇಶವನ್ನು ಪುನರುಚ್ಚರಿಸಿತು.

ಈಸಂದರ್ಭ ದಲ್ಲಿ ರಾಜು ಡೋಂಗ್ರೆ ಯದುರಾವ್ ರಾನಡೆ ಮಾಧವ್ ಲೋಕೇಶ್ ಅಜಯ್ ವಿಜಯ್ ಮಹೇಶ್ ಭೀಮ್ ದಾಮು ಸಂತೋಷ್ ಸುರೇಕಾಂತ್ ಮಹೇಶ್ ಹಾಗ ಮಕ್ಳು ಇದ್ದರು.