ರಾಮ ಮಂದಿರದಲ್ಲಿ ವಿಶೇಷ ಪೂಜೆ, ಪೋಸ್ಟರ್ ಬಿಡುಗಡೆ ಮಾರ್ಚ್ ೨೬ರಂದು ಭವ್ಯ ಮೆರವಣಿಗೆಗೆ ಆಹ್ವಾನ
ರಾಮ ಮಂದಿರದಲ್ಲಿ ವಿಶೇಷ ಪೂಜೆ, ಪೋಸ್ಟರ್ ಬಿಡುಗಡೆ ಮಾರ್ಚ್ ೨೬ರಂದು ಭವ್ಯ ಮೆರವಣಿಗೆಗೆ ಆಹ್ವಾನ
ಕಲಬುರಗಿ ; ರಾಮನವಮಿ ಹಬ್ಬದ ಅಂಗವಾಗಿ ಮಾರ್ಚ್ ೨೬ರಂದು ಶ್ರೀರಾಮನ ಭವ್ಯ ಮೂರ್ತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಸೇವಕ ಗಜಾನಂದ ದೇಶಪಾಂಡೆ ತಿಳಿಸಿದ್ದಾರೆ.
ನಗರದ ರಾಮ ಮಂದಿರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಯ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಕನ್ನಡ ನಾಡು ರಕ್ಷಣಾ ಪಡೆ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಈ ಬಾರಿ ೭ ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಸಾಗಿಸಲಾಗುವುದು ಎಂದು ವಿವರಿಸಿದರು.
ಸಂತೋಷ ಕಾಲೋನಿಯ ಕೃಷ್ಣೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಮೆರವಣಿಗೆ ರಾಮ ಮಂದಿರ ಸರ್ಕಲ್ ವರೆಗೆ ಸಾಗಲಿದೆ. ಮೆರವಣಿಗೆಯಲ್ಲಿ ನಾಸಿಕ್ ಡೋಲ್, ಡಿಜೆ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿ ವಿಶೇಷ ಆಕರ್ಷಣೆಯಾಗಿ ಇರಲಿವೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಹಾಗೂ ಹಿಂದೂ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕೆಂದು ಗಜಾನಂದ ದೇಶಪಾಂಡೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕನ್ನಡ ನಾಡು ರಕ್ಷಣಾ ಪಡೆ ಕಲಬುರಗಿ ಜಿಲ್ಲಾಧ್ಯಕ್ಷ ವಿನೋದಕುಮಾರ್, ಶ್ರೀರಾಮನ ಭವ್ಯ ಮೆರವಣಿಗೆಯಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿನೋದ್ ಎಂ ಪಾಟೀಲ್, ಶಿವಕುಮಾರ್ ಹಿರೇಮಠ, ವಿಶ್ವನಾಥ್ ಸಾಲಿಮಠ, ಶಶಿಧರ್ ವಾರದ್, ವಿಶಾಲ್ ಮುತ್ಯಾ, ಮಲ್ಲಿಕಾರ್ಜುನ ಅವಂಟಿ, ಗುರುರಾಜ್ ಕೊರಳಿ, ಪವನ್ ಕುಮಾರ್ ಸಾವಳಗಿ, ಕಾರ್ತಿಕ್ ಜಮಾದಾರ್, ಶರಣು ಉಪ್ಪಿನಾಯಕ್, ನಾಗರೆಡ್ಡಿ, ಶಕ್ತಿ ಚೌವ್ಹಾಣ, ವಿಶಾಲ್ ಸಂಪತ್, ಮಂಜುನಾಥ್ ನಾಗಂಟೆ, ರಾಘವೇಂದ್ರ ಗುತ್ತೇದಾರ, ದಿನೇಶ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
