ಜಿಲ್ಲಾ ಹಟಗಾರ ಸಮಾಜದ, ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರೀಯ ಕೈಮಗ್ಗ ದಿನಾಚರಣೆ. 2026 ರ ಸಂಚಾಲಕರು ಸತೀಶ ಜಮಖಂಡಿ.
ರೈತ–ನೇಕಾರರು ನಮ್ಮ ಎರಡು ಕಣ್ಣುಗಳಿದ್ದಂತೆ: ಅಲ್ಲಮಪ್ರಭು ಪಾಟೀಲ
**ಕಲಬುರಗಿ:** ಜಿಲ್ಲಾ ಹಟಗಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಪ್ರತಿಭಾ ಪುರಸ್ಕಾರ ಹಾಗೂ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ 2026ನೇ ಸಾಲಿನ ಕಾರ್ಯಕ್ರಮದ ಸಂಚಾಲಕ ಸತೀಶ ಜಮಖಂಡಿ ಅವರ ನೇತೃತ್ವದಲ್ಲಿ ಆಯೋಜಕರ ತಂಡವು ಮಂಗಳವಾರ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿತು.
ಆಮಂತ್ರಣ ಪತ್ರಿಕೆ ಸ್ವೀಕರಿಸಿದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, “ರೈತ ಮತ್ತು ನೇಕಾರರು ನಮ್ಮ ಎರಡು ಕಣ್ಣುಗಳಿದ್ದಂತೆ. ಇಬ್ಬರ ಬಗ್ಗೆಯೂ ನಾನು ಸಮಾನ ದೃಷ್ಟಿಕೋನ ಹೊಂದಿದ್ದೇನೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತೇನೆ” ಎಂದು ಭರವಸೆ ನೀಡಿದರು.
ಜಿಲ್ಲಾ ಹಟಗಾರ ಸಂಘದ ಅಧ್ಯಕ್ಷ ಶ್ರವಣಕುಮಾರ ಮುನೋಳಿ, ಕಾರ್ಯದರ್ಶಿ ಚಂದ್ರಕಾಂತ, ಕಾರ್ಯಕ್ರಮದ ಸಂಚಾಲಕ ಸತೀಶ ಜಮಖಂಡಿ, ಸಂಘಟನೆಯ ಯುವ ಮುಖಂಡ ಪ್ರಕಾಶ ಪೊಲೀಸ್ ಪಾಟೀಲ, ಡಾ. ಬಸವರಾಜ ಚನ್ನಾ, ಪರಮೇಶ್ವರ ಮುನೋಳಿ ಹಾಗೂ ಸಂವಿಧಾನದ ಅನುಚ್ಛೇದ 171(3) ತಿದ್ದುಪಡಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೇ.ಎಸ್. ವಿನೋದಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು..

