ದಿವ್ಯ–ಭವ್ಯ ರಾಮೇಶ್ವರ ಯಾತ್ರೆ: ಭಕ್ತರಿಗಾಗಿ ವಿಶೇಷ ರೈಲು ವ್ಯವಸ್ಥೆ

ದಿವ್ಯ–ಭವ್ಯ ರಾಮೇಶ್ವರ ಯಾತ್ರೆ: ಭಕ್ತರಿಗಾಗಿ ವಿಶೇಷ ರೈಲು ವ್ಯವಸ್ಥೆ

ದಿವ್ಯ–ಭವ್ಯ ರಾಮೇಶ್ವರ ಯಾತ್ರೆ: ಭಕ್ತರಿಗಾಗಿ ವಿಶೇಷ ರೈಲು ವ್ಯವಸ್ಥೆ

ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಸ್ಟೇಷನ್ ಗಾಣಗಾಪೂರದ ಪೂಜ್ಯಶ್ರೀ ನಾಗು ಮುತ್ಯಾ ಸ್ಥಾವರಮಠ ಅವರ ನೇತೃತ್ವದಲ್ಲಿ ಭಕ್ತರಿಗಾಗಿ ಬೃಹತ್ ರಾಮೇಶ್ವರ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ದಿವ್ಯ ಯಾತ್ರೆ ಶ್ರೀ ಷ.ಬ್ರ.ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಹಾಗೂ ಷ.ಬ್ರ. ಶ್ರೀ ವೀರ ಮಹಾಂತ ಶಿವಾಚಾರ್ಯರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಯಾತ್ರೆಯ ಭಾಗವಾಗಿ ಕನ್ಯಾಕುಮಾರಿ, ಅನಂತ ಪದ್ಮನಾಭ, ರಾಮೇಶ್ವರ ಮತ್ತು ಮದುರೈ ಮೀನಾಕ್ಷಿ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಲಿದ್ದಾರೆ. ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, A/C ಕೋಚ್ ಸೌಲಭ್ಯವೂ ಲಭ್ಯವಿದೆ.

ಎಪ್ರಿಲ್ 26, 2026ರಂದು ಸಂಜೆ 7 ಗಂಟೆಗೆ ಸ್ಟೇಷನ್ ಗಾಣಗಾಪೂರದಿಂದ ಪ್ರಯಾಣ ಆರಂಭವಾಗಲಿದ್ದು, ಒಟ್ಟು 7 ದಿನಗಳ ಯಾತ್ರೆಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪವಿತ್ರ ಯಾತ್ರೆಗೆ ಕೇವಲ ರೂ. 10,500/- ಶುಲ್ಕ ನಿಗದಿಪಡಿಸಲಾಗಿದೆ.

ಯಾತ್ರೆಗೆ ನೋಂದಣಿ ಮಾಡಲು ಏಪ್ರಿಲ್ 10, 2026 ಕೊನೆಯ ದಿನಾಂಕವಾಗಿದ್ದು, ಭಕ್ತರು ತಕ್ಷಣವೇ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

7204999559, 9900099143, 9632159990, 8722406143

“ಧರ್ಮದಿಂದಲೇ ಶಾಂತಿ – ಯಾತ್ರೆಯಿಂದಲೇ ಆತ್ಮಶುದ್ಧಿ” ಎಂಬ ಸಂದೇಶದೊಂದಿಗೆ ಈ ಮಹಾಯಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.